ಗುರುವಾರ , ಮೇ 19, 2022
25 °C

ಪಾರ್ಟಿಗೆ ಹಂಟರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾವುದೇ ಸಂತೋಷ ಕೂಟವನ್ನು ವಿಭಿನ್ನವಾಗಿ ಆಚರಣೆ ಮಾಡಿದಾಗ ಮಾತ್ರ ಅದರ ನೆನಪು ಬಹುಕಾಲದ ವರೆಗೂ ಉಳಿಯುತ್ತದೆ. ಆದರೆ ವಿಭಿನ್ನವಾಗಿ ಆಲೋಚಿಸುವ ಹಾಗೂ ಅದಕ್ಕೆ ಹೊಂದುವಂತಹ ಪರಿಕರಗಳನ್ನು ತಯಾರಿಸಿಕೊಡುವ ಸೃಜನಶೀಲರ ಸಂಖ್ಯೆ ವಿರಳ.ವಿಭಿನ್ನತೆ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ ಕಮರ್ಷಿಯಲ್ ಸ್ಟ್ರೀಟ್‌ನ `ಪಾರ್ಟಿ ಹಂಟರ್ಸ್~. ನಗರದ ವಿವಿಧೆಡೆ ಈಗ ಹಾಲೊವೀನ್ ಆಚರಣೆಯ ಗುಂಗು ತಲೆಯೆತ್ತಿದೆ.ಇದಕ್ಕೆಂದೇ ಇಲ್ಲಿ ಮುಖವಾಡ, ಕಾಸ್ಟ್ಯೂಮ್, ಕುಂಬಳಕಾಯಿಯಿಂದ ತಯಾರಿಸಿದ ಲಾಟೀನು, ಅಸ್ತಿಪಂಜರದ ಚಿತ್ರಣ ಹೊಂದಿರುವ ಬಟ್ಟೆ, ರಕ್ತ ಪಿಶಾಚಿಯ ಹಲ್ಲುಗಳು ಮೊದಲಾದವುಗಳು ಲಭ್ಯವಿದೆ.ಭರ್ಜರಿಯಾದ ಸಂತೋಷ ಕೂಟಕ್ಕೆ ಹೇಳಿಮಾಡಿಸಿದ ರೀತಿಯಲ್ಲಿ ಬೇಕಾದ ಪರಿಕರಗಳನ್ನು ಒದಗಿಸುವಲ್ಲಿ ಪಾರ್ಟಿ ಹಂಟರ್ಸ್ ಸದಾ ಮುಂದು. ಇದು ವಿಗ್‌ಗಳು, ಮುಖವಾಡಗಳು, ಮೇಕಪ್ ಕಿಟ್ಸ್ ಮೊದಲಾದ ಅಲಂಕಾರಿಕ ಸಾಮಗ್ರಿಗಳನ್ನು ಸಹ ಒದಗಿಸುತ್ತಿದೆ. ಪಾರ್ಟಿ ಹಂಟರ್ಸ್ ಮುಖ್ಯವಾಗಿ ರಾಕ್‌ಸ್ಟಾರ್, ಆರ್ಮಿ, ಸೂಪರ್ ಹೀರೊ, ವಿಮೆನ್, ಪೈರೇಟ್, ಕ್ಯಾಸಿನೊ, ಲೆಡ್ ಬಾರ್‌ವೇರ್ ಮೊದಲಾದ ಥೀಮ್ ಪಾರ್ಟಿಗಳಿಗೆ ಬೇಕಾದ ಪರಿಕರಗಳನ್ನು ಸಹ ಒದಗಿಸುತ್ತಾ ಬರುತ್ತಿದೆ.ಅಲ್ಲದೇ ಸಾಂದರ್ಭಿಕವಾಗಿ ಬರುವ ದೀಪಾವಳಿ, ಹಾಲೊವೀನ್, ವ್ಯಾಲೆಂಟೈನ್ಸ್ ಡೇ, ಮದರ್ಸ್‌ ಡೇ, ಶಿಕ್ಷಕರ ದಿನ ಹಾಗೂ ವ್ಯಕ್ತಿಗಳ ಜೀವನದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಹುಟ್ಟಿದ ಹಬ್ಬ, ಗ್ರಾಜುಯೇಷನ್‌ಡೇ, ಸ್ವೀಟ್ 16, ನಿವೃತ್ತಿ ದಿನಗಳಿಗೆ ಬೇಕಾದ ವಸ್ತುಗಳನ್ನು ಸಹ ಇಲ್ಲಿ ವಿನ್ಯಾಸ ಮಾಡಿಕೊಡಲಾಗುತ್ತದೆ. ಜತೆಗೆ ವಿಭಿನ್ನವಾಗಿ ಸಂತೋಷ ಕೂಟವನ್ನು ಆಚರಿಸಲು ಬೇಕಾದ ಹೊಸ ಐಡಿಯಾ ಹಾಗೂ ವಿನ್ಯಾಸವನ್ನು ಮಾಡಿಕೊಡುತ್ತಾರೆ.

ಮಾಹಿತಿಗೆ: 99642 02997 ಠಿಠಿ//ಡಿಡಿಡಿ.ಚ್ಟಠಿಜ್ಠ್ಞಠಿಛ್ಟ್ಢಿ.್ಚಟಞ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.