ಗುರುವಾರ , ನವೆಂಬರ್ 21, 2019
26 °C

ಪಾರ್ಲೆ ಗೋಲ್ಡ್‌ಸ್ಟಾರ್ ಕುಕ್ಕೀಸ್‌ಗೆ ಬಿಗ್ ಬಿ ರಾಯಭಾರಿ

Published:
Updated:

ಪಾರ್ಲೆ ಗೋಲ್ಡ್‌ಸ್ಟಾರ್ ಕುಕ್ಕೀಸ್‌ನ ಹೊಸ ಉತ್ಪನ್ನಕ್ಕೆ ರಾಯಭಾರಿಯಾಗಿ ಅಮಿತಾಭ್ ಬಚ್ಚನ್ ಆಯ್ಕೆಯಾಗಿದ್ದು, ಅವರಿಂದ ಕಂಪೆನಿಯು ಮಾರುಕಟ್ಟೆ ಆಂದೋಲನ ನಡೆಸಲಿದೆ.ಗೋಲ್ಡ್‌ಸ್ಟಾರ್‌ನೊಂದಿಗೆ ಪಾರ್ಲೆ ಕಂಪೆನಿ ಪ್ರಾಥಮಿಕ ಕುಕ್ಕೀಸ್ ವಲಯದಲ್ಲಿ ಉತ್ತಮ ಗುಣಮಟ್ಟ ಮತ್ತು ರುಚಿಯಾದ ಉತ್ಪನ್ನವನ್ನು ಒದಗಿಸುತ್ತಿದೆ. ಈ ಕುಕ್ಕೀಸ್ ಬೆಣ್ಣೆ, ಗೋಡಂಬಿ ಬೆಣ್ಣೆ, ಚಾಕೊಲೇಟ್ ಚಿಪ್ ಮತ್ತು ಚಾಕೊಲೆಟ್ ನಟ್ ಸ್ವಾದಗಳಲ್ಲಿ ಲಭ್ಯ.

ಪಾರ್ಲೆಯಂಥ ಐಕಾನ್ ಬ್ರಾಂಡ್‌ನೊಂದಿಗೆ ಸಹಭಾಗಿತ್ವ ಸಂತೋಷದ ಸಂಗತಿ. ಭಾರತದಲ್ಲಿ ಬೇರೆ ಯಾವುದೇ ಬಿಸ್ಕತ್ ಬ್ರ್ಯಾಂಡ್ ಪಾರ್ಲೆಯಷ್ಟು ಜನಪ್ರಿಯವಾಗಿಲ್ಲ ಎಂದಿದ್ದಾರೆ ಬಿಗ್ ಬಿ.

ಪ್ರತಿಕ್ರಿಯಿಸಿ (+)