ಶುಕ್ರವಾರ, ಏಪ್ರಿಲ್ 16, 2021
20 °C

ಪಾರ್ವತಿ ಮೇಯರ್ ಆಗಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮಹಾನಗರ ಪಾಲಿಕೆ ನಾಲ್ಕನೇ ವರ್ಷದ ಅವಧಿಗೆ ಮೇಯರ್ ಆಗಿ ಪಾರ್ವತಿ ಇಂದುಶೇಖರ್, ಉಪಮೇಯರ್ ಆಗಿ ಶಶಿಕಲಾ ಕೃಷ್ಣಮೋಹನ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಭಾನುವಾರ ನಡೆದ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಒಂದನೇ ವಾರ್ಡಿನ ಪಾರ್ವತಿ ಇಂದುಶೇಖರ್ ಮತ್ತು ಉಪ ಮೇಯರ್ ಸ್ಥಾನಕ್ಕೆ 21ನೇ ವಾರ್ಡಿನ ಶಶಿಕಲಾ ಕೃಷ್ಣಮೋಹನ್ ಅವರು ನಾಮಪತ್ರ ಸಲ್ಲಿಸಿದ್ದರು.ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಬೇರಾವುದೇ ನಾಮಪತ್ರಗಳಿರಲಿಲ್ಲ. ಹೀಗಾಗಿ ಈ ಅಭ್ಯರ್ಥಿಗಳ ಮಧ್ಯೆ ಪ್ರತಿಸ್ಪರ್ಧೆ ಏರ್ಪಡದೇ ಇರುವುದರಿಂದ “ಮೇಯರ್ ಆಗಿ ಪಾರ್ವತಿ ಇಂದುಶೇಖರ್, ಉಪಮೇಯರ್ ಆಗಿ ಶಶಿಕಲಾ ಕೃಷ್ಣಮೋಹನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಮುಖ್ಯ ಚುನಾವಣಾ ಅಧಿಕಾರಿ ರಜನೀಶ್ ಗೋಯೆಲ್ ಅವರು ಪ್ರಕಟಿಸಿದರು.ಶಾಸಕ ಜಿ.ಸೋಮಶೇಖರ ರೆಡ್ಡಿ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಪಾಲಿಕೆ ಆಯುಕ್ತ ಲಕ್ಷ್ಮಿನಾರಾಯಣ ರೆಡ್ಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಾಹುಕಾರ ಸತೀಶಬಾಬು, ಮಾಜಿ ಸಂಸದ ಕೋಳೂರು ಬಸವನಗೌಡ, ಇಂದುಶೇಖರ್ ಸಂಗನಕಲ್, ಬುಡಾ ಅಧ್ಯಕ್ಷ ಎಸ್.ಗುರುಲಿಂಗನಗೌಡ, ಡಾ.ಎಸ್.ಜೆ.ವಿ. ಮಹಿಪಾಲ, ಹಂಪೇರು ಅಲೇಶ್ವರಗೌಡ ಮತ್ತಿತರರು ನೂತನ ಪಾಲಿಕೆ ಮೇಯರ್ - ಉಪಮೇಯರ್ ಅವರಿಗೆ ಅಭಿನಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.