ಪಾರ್ಶ್ವವಾಯು ಪೀಡಿತರ ಮನೆಗಳಿಗೆ ಭೇಟಿ

7

ಪಾರ್ಶ್ವವಾಯು ಪೀಡಿತರ ಮನೆಗಳಿಗೆ ಭೇಟಿ

Published:
Updated:

ಭಟ್ಕಳ: ತಾಲ್ಲೂಕಿನ ಬಂದರ್ ಮಾವಿನ ಕುರ್ವೆಯ ಪಾರ್ಶ್ವವಾಯು ಪೀಡಿತರ ಮನೆಗಳಿಗೆ ತಹಸೀಲ್ದಾರ್ ಡಾ.ಮಧು ಕೇಶ್ವರ್,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚೆನ್ನಪ್ಪ ಮೊಯ್ಲಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.ಮಾವಿನಕುರ್ವೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಪಾರ್ಶ್ವ ವಾಯು ಖಾಯಿಲೆಯಿಂದ ಬಳಲು ತ್ತಿದ್ದಾರೆ. ಹತ್ತು, ಹದಿನೈದು ವರ್ಷ ಗಳಿಂದ ಈ ಖಾಯಿಲೆಯಿಂದ ಬಳಲು ತ್ತಿರುವವರೂ ಇದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಕೆಲವರಿಗೆ ಸರ್ಕಾರದಿಂದ ಮಾಸಿಕ ಪಿಂಚಣಿ ಮಂಜೂರಾಗಿದ್ದರೂ ಇನ್ನೂ ತನಕ ಹಣ ಬಂದಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಖಾಯಿಲೆ ಪೀಡಿತರ ಸಂಕಟ,ಸಂಕಷ್ಟಗಳನ್ನು ಕಣ್ಣಾರೆ ಕಂಡು, ಕುಟುಂಬದವರಿಂದ ಮಾಹಿತಿ ಪಡೆದರು.ಸರ್ಕಾರದ ಪಿಂಚಣಿ ಹಣ ದೊರಕಿಸಿ ಕೊಟ್ಟರೆ ಔಷಧ ಮತ್ತಿತರ ಖರ್ಚು ಗಳಿಗಾದರೂ ಆಗುತ್ತದೆ ಎಂದು ತಮ್ಮ ಅಳಲನ್ನು ಕುಟುಂಬದವರು ತೋಡಿ ಕೊಂಡರು. ಇದಕ್ಕೆ ಸ್ಪಂದಿಸಿದ ತಹ ಸೀಲ್ದಾರ್ ಡಾ.ಮಧುಕೇಶ್ವರ್, ಪಿಂಚಣಿ ಹಣವನ್ನು ತಕ್ಷಣ ದೊರಕಿಸಿ ಕೊಡುವ ಭರವಸೆ ನೀಡಿ, ಅಗತ್ಯ ದಾಖಲೆಪತ್ರಗಳನ್ನು ಗ್ರಾಮಲೆಕ್ಕಿಗರಲ್ಲಿ ನೀಡುವಂತೆ ಸೂಚಿಸಿದರು.ಈ ಭಾಗದಲ್ಲಿ ಗಟಾರದಲ್ಲಿ ಕೊಳಚೆ ನೀರು ನಿಂತಿರುವುದನ್ನು ಗಮನಿಸಿದ ಕಾರ್ಯನಿರ್ವಾಹಕ ಅಧಿಕಾರಿ ಚೆನ್ನಪ್ಪ ಮೊಯ್ಲಿ, ತಕ್ಷಣ ಇದನ್ನು ಸರಿ ಪಡಿಸುವಂತೆ, ಸ್ವಚ್ಚತೆಗೆ ಗಮನ ಹರಿಸು ವಂತೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಸೂಚಿಸಿದರು. ಆರೋಗ್ಯಾಧಿಕಾರಿ ಪ್ರಕಾಶ ಕಾಮತ್, ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ,ಕಂದಾಯ ನಿರೀಕ್ಷಕ ಬಂಟ್,ಗ್ರಾ.ಪಂ.ಅಧ್ಯಕ್ಷ ಚಂದ್ರು ದೇವಾಡಿಗ, ಅಭಿವೃದ್ದಿ      ಅಧಿಕಾರಿ ಎಸ್‌ವಿ ಭಟ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಜುನಾಥ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry