ಬುಧವಾರ, ಜೂನ್ 16, 2021
22 °C
ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ

ಪಾಲಿಕೆಗಳಿಗೆ 990 ‘ಡಿ’ ಗ್ರೂಪ್‌ ನೌಕರರ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಲ್ಲಿ (ತುಮ­ಕೂರು, ವಿಜಾಪುರ, ಶಿವಮೊಗ್ಗ ಸೇರಿ) ಖಾಲಿ ಇರುವ 990 ‘ಡಿ’ ದರ್ಜೆ ಹುದ್ದೆಗಳನ್ನು ಭರ್ತಿ ಮಾಡಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.ವಿವಿಧ ಪಾಲಿಕೆಗಳಲ್ಲಿ ಒಟ್ಟು 3,811 ಹುದ್ದೆಗಳು ಖಾಲಿ ಇವೆ. ಮೊದಲ ಹಂತದಲ್ಲಿ 990 ಹುದ್ದೆ ತುಂಬಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮಂಗಳ­ವಾರ ಇಲ್ಲಿ ಸಂಪುಟ ಸಭೆಯ ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸುದ್ದಿಗಾರರಿಗೆ ತಿಳಿಸಿದರು. ಇಲಾಖೆ ಮಟ್ಟದಲ್ಲೇ ನೇಮಕಾತಿ ನಡೆಯಲಿದೆ ಎಂದು ಅವರು ಹೇಳಿದರು.ಮಹಾನಗರ ಪಾಲಿಕೆಗಳಲ್ಲಿನ ಗುತ್ತಿಗೆ ನೌಕರರಿಗೆ ಸರಿಯಾದ ವೇತನ ಸಿಗುತ್ತಿಲ್ಲ ಎನ್ನುವ ದೂರು ಬಂದಿವೆ. ಹೀಗಾಗಿ ಹೊರಗುತ್ತಿಗೆ ಪದ್ಧತಿಯನ್ನು ಹಂತಹಂತ­ವಾಗಿ ರದ್ದುಪಡಿಸಲು ತೀರ್ಮಾ-­­ನಿ­ಸಲಾಗಿದೆ ಎಂದು ವಿವರಿಸಿದರು.ಅನುಕಂಪದ ನೌಕರಿ ನಿಯಮ ಬದಲು: ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯುವುದಕ್ಕೆ ಇದ್ದ ನಿಯಮ­ಗಳನ್ನು ಬದಲಿಸಲು ರಾಜ್ಯ ಸಂಪುಟ ತೀರ್ಮಾನಿಸಿದೆ. ಕೆಲಸ ಮಾಡಲು ಸಾಧ್ಯವೇ ಇಲ್ಲ­ದಂಥ ದೈಹಿಕ ಅಸಾಮರ್ಥ್ಯದ ಸಂದರ್ಭ­ದಲ್ಲಿ ಅವರ ನೌಕರಿಯನ್ನು ಅವರ ಕುಟುಂಬದವರಿಗೆ ನೀಡಲು ಹಳೇ ನಿಯ­ಮಗಳಲ್ಲಿ ಅವಕಾಶ ಇತ್ತು. ಆದರೆ ಇದನ್ನು ದುರುಪಯೋಗ ಮಾಡಿ­ಕೊ­ಳ್ಳುವ ಪ್ರಕರಣಗಳು ಹೆಚ್ಚಿದ್ದವು. ಹೀಗಾಗಿ ನಿಯಮಗಳಿಗೆ ಕೆಳಗಿನಂತೆ ಬದಲಾವಣೆ ತರಲಾಗಿದೆ.* ಪಾರ್ಶ್ವವಾಯು ಪೀಡಿತರು ಸಲ್ಲಿ­ಸುವ ವೈದ್ಯಕೀಯ ದಾಖಲೆ, ಖುದ್ದು ಪರಿಶೀಲನೆ ನಂತರ ಅವರ ಕುಟುಂಬ­ದವರಿಗೆ ಉದ್ಯೋಗ ನೀಡಬಹುದು.* ನೌಕರರೊಬ್ಬರು ಸತತ ಏಳು ವರ್ಷ ನಾಪತ್ತೆಯಾಗಿದ್ದರೆ, ಅವರು ಬದುಕಿಲ್ಲ ಎಂದು ಪರಿಗಣಿಸಿ ಕುಟುಂಬದವರಿಗೆ ನೌಕರಿ ನೀಡಲು ಅವಕಾಶ ಕಲ್ಪಿಸ­ಲಾಗಿದೆ. ಇದೇ ರೀತಿ 15 ವಿವಿಧ ಬಗೆಯ ಪ್ರಕರಣ­ಗಳನ್ನು ಹೊಸ ನಿಯಮದ ವ್ಯಾಪ್ತಿಗೆ ತರಲಾಗಿದೆ.* ಗಾಂಧಿ ಪ್ರತಿಮೆಗೆ ರೂ.8.8 ಕೋಟಿ: ವಿಧಾನ ಸೌಧ ಮತ್ತು ವಿಕಾಸ ಸೌಧ ಮಧ್ಯೆ ರೂ.8.85 ಕೋಟಿ ವೆಚ್ಚ­ದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಸ್ಥಾಪನೆಗೆ ಸಂಪುಟ ಅನುಮೋದನೆ.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.