ಪಾಲಿಕೆ ಉಪ ಚುನಾವಣೆ 8 ಜನರಿಂದ ನಾಮಪತ್ರ

7

ಪಾಲಿಕೆ ಉಪ ಚುನಾವಣೆ 8 ಜನರಿಂದ ನಾಮಪತ್ರ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ ವಾರ್ಡ್‌ಗೆ ಇದೇ ತಿಂಗಳ 26ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಟಿ. ಗೋಪಾಲಕೃಷ್ಣ ಹಾಗೂ ಎಐಎಡಿಎಂಕೆಯಿಂದ ಎಂ.ಪಿ. ಯುವರಾಜ್ ಸೋಮವಾರ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಇದುವರೆಗೆ ಒಟ್ಟು ಎಂಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆಯಿಂದ ತೆರವಾಗಿರುವ ಈ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ ತಿಂಗಳ 15 ಕಡೇ ದಿನ. 26ರಂದು ಚುನಾವಣೆ ನಡೆಯಲಿದೆ.ನಾಮಪತ್ರ ಸಲ್ಲಿಸಿದವರ ವಿವರ: ಕೆ. ಶಿವರಾಮಣ್ಣ (ಕನ್ನಡ ಚಳವಳಿ ಸಂಯುಕ್ತ ರಂಗ), ಕೆ. ರಮೇಶ್ (ಕಾಂಗ್ರೆಸ್-ಐ), ಎಸ್.ಎನ್.ರಮೇಶ್ (ಪಕ್ಷೇತರ), ಶಂಭುಲಿಂಗೇಗೌಡ (ಪಕ್ಷೇತರ), ಎ.ಕೆ.ಎಸ್. ಮಹೇಶ್ ಯಾದವ್ (ಪಕ್ಷೇತರ), ಟಿ. ಗೋಪಾಲಕೃಷ್ಣ  (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಜಿ. ರಾಮಚಂದ್ರ (ಬಿಜೆಪಿ), ಎಂ.ಪಿ. ಯುವರಾಜ್ (ಎಐಎಡಿಎಂಕೆ).ಕಾಂಗ್ರೆಸ್ ಅಭ್ಯರ್ಥಿ ಟಿ. ಗೋಪಾಲಕೃಷ್ಣ ಎರಡು ಸೆಟ್ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯ ಜಿ. ರಾಮಚಂದ್ರ ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry