ಪಾಲಿಕೆ ಚುನಾವಣೆಗೆ ಸಿದ್ಧರಾಗಲು ಕರೆ

7

ಪಾಲಿಕೆ ಚುನಾವಣೆಗೆ ಸಿದ್ಧರಾಗಲು ಕರೆ

Published:
Updated:

ದಾವಣಗೆರೆ: ನಗರಪಾಲಿಕೆಗೆ ಶೀಘ್ರವೇ ಚುನಾವಣೆ ಎದುರಾಗಲಿದ್ದು, ಮಹಿಳೆಯರು ಸೇರಿದಂತೆ ಎಲ್ಲ ಕಾರ್ಯಕರ್ತರು ಸಜ್ಜುಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಪುಷ್ಪಾ ಲಕ್ಷ್ಮಣಸ್ವಾಮಿ ಕರೆ ನೀಡಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ನಗರಪಾಲಿಕೆಯಲ್ಲಿ ಬಿಜೆಪಿ ಕಿತ್ತೆಸೆಯಬೇಕು ಎಂದು ಕರೆ ನೀಡಿದರು.ಕೆಪಿಸಿಸಿ ಸದಸ್ಯ ಡಿ. ಬಸವರಾಜ ಮಾತನಾಡಿ, ನಗರಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಮಹಿಳೆಯರು ಪ್ರಯತ್ನಿಸಬೇಕು. ಏಕೆಂದರೆ, ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಬಂದಿದ್ದು, ಪಾಲಿಕೆಯ 41 ಸ್ಥಾನಗಳಲ್ಲಿ 21 ಸ್ಥಾನಗಳು ಮಹಿಳೆಯರಿಗೆ ದೊರಕಲಿದೆ. ಈ ಎಲ್ಲ ಸ್ಥಾನಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.ಮುಖಂಡರಾದ ಕೆ.ಜಿ. ಲಿಂಗರಾಜ್, ಜ್ಯೋತಿ ಜಂಬಿಗಿ ರಾಧೇಶ್, ಪದ್ಮಾ ವೆಂಕಟೇಶ್, ಲಲಿತಮ್ಮ ತಿಪ್ಪೇಸ್ವಾಮಿ, ಗೀತಾ ಮುರುಗೇಶ್, ವಿಜಯಾ ಲಿಂಗರಾಜ್, ಮಹಾದೇವಮ್ಮ, ಪುಷ್ಪಾ ಆರ್. ಜಗನ್ನಾಥ್, ಮೀನಾಕ್ಷಮ್ಮ, ಉಮಾ, ಸುನಿತಾ, ಸುಮಿತ್ರಾ, ದಾಕ್ಷಾಯಣಮ್ಮ, ರಾಜೇಶ್ವರಿ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry