ಬುಧವಾರ, ಜೂನ್ 16, 2021
22 °C

ಪಾಲಿಕೆ ಮಳಿಗೆಗಳ ಬಾಡಿಗೆದಾರರ ಸಂಘದ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪಾಲಿಕೆಯ ವ್ಯಾಪಾರ ಮಳಿಗೆಗಳ ಬಾಡಿಗೆಯನ್ನು ನಿಯಮ ಮೀರಿ ಹೆಚ್ಚಿಸುತ್ತಿರುವ ಕ್ರಮ ವಿರೋಧಿಸಿ ಪಾಲಿಕೆ ಮಳಿಗೆಗಳ ಬಾಡಿಗೆದಾರರ ಸಂಘದ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.ಪಾಲಿಕೆ ಮಳಿಗೆಗಳ ಬಾಡಿಗೆಯನ್ನು ಮೂರು ವರ್ಷಗಳಿಗೊಮ್ಮೆ ಹೆಚ್ಚಿಸಲಾಗುತ್ತಿತ್ತು. ಇದೀಗ ಬಾಡಿಗೆದಾರರನ್ನು ಪ್ರತ್ಯೇಕವಾಗಿ ಕರೆದು ಮೂರರಿಂದ ಐದುಪಟ್ಟು ಬಾಡಿಗೆ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ. ಸರ್ಕಾರದ ನಿಯಮಾವಳಿಯನ್ನು ಅಧಿಕಾರಿಗಳು ಸ್ಪಷ್ಟಪಡಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಬಾಡಿಗೆ ಮೊತ್ತದ ವಿಪರೀತ ಹೆಚ್ಚಳದಿಂದಾಗಿ ವ್ಯಾಪಾರಿಗಳು ವ್ಯವಹಾರ ನಡೆಸುವುದೇ ಕಷ್ಟವಾಗಿದೆ. ನಗರದಲ್ಲಿ ಪಾಲಿಕೆಗೆ ಸೇರಿದ 400 ಮಳಿಗೆಗಳು ಇವೆ. ಚಾಮರಾಜ ಪೇಟೆಯ ಮಳಿಗೆಗೆರೂ600, ಜಿಲ್ಲಾ ಕ್ರೀಡಾಂಗಣದ ಬಳಿಯ ಮಳಿಗೆಗೆರೂ1,300 ಲೇಬರ್ ಕಾಲೊನಿಯ ಮಳಿಗೆಗೆರೂ350 ನಿಗದಿಪಡಿಸಲಾಗಿದೆ. ಆದರೆ, ಇದೀಗ ಏಕಾಏಕಿ 2011ರ ಏಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ಹೆಚ್ಚುವರಿ ಬಾಡಿಗೆ ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂದು ದೂರಿದರು.ಸರ್ಕಾರದ ನಿಯಮಾವಳಿಗಳ ಪ್ರಕಾರ ಬಾಡಿಗೆ ಪಾವತಿಗೆ ಬದ್ಧರಿದ್ದೇವೆ. ಅದರ ಹೊರತಾಗಿ ಯಾವುದೇ ಮೊತ್ತ ಪಾವತಿಸಲು ಸಾಧ್ಯವಿಲ್ಲ. ಅನೇಕ ಬಾಡಿಗೆದಾರರಿಂದ ಹೆಚ್ಚುವರಿ ಮುಂಗಡ ಹಣ ವಸೂಲು ಮಾಡಲಾಗಿದೆ. ಹೆಚ್ಚುವರಿ ಮುಂಗಡ ಹಣ ಪಾವತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಾಡಿಗೆ ದರವನ್ನು ಏಕಾಏಕಿ ಹೆಚ್ಚಿಸಬಾರದು. ಸರ್ಕಾರದ ಆದೇಶ ಪಾಲಿಸಬೇಕು. ಇದಕ್ಕೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪಾಲಿಕೆ ಮಾಜಿ ಸದಸ್ಯ ಭೈರಪ್ಪ, ನಾಗೇಂದ್ರ ಬಂಡೀಕರ್, ಉಮಾಪತಿ, ನಾಗರಾಜ್, ಆರ್. ರುದ್ರೇಶ್, ನಾಗಭೂಷಣ ತೌಡೂರು, ಬಿ.ವಿ. ರಾಜಶೇಖರ, ಸುಭಾನ್ ಸಾಬ್, ಜಿ. ಬಾಬು, ಸಿ.ಆರ್. ಕೃಷ್ಣಪ್ಪ  ಇದ್ದರು.24ಕ್ಕೆ ಕೋಸೌವೇ ಪ್ರತಿಭಟನೆಶಿಕ್ಷಣದಲ್ಲಿ ಕೇಸರಿಕರಣ ಹಾಗೂ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ವಿರುದ್ಧ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮಾರ್ಚ್ 24ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.ಅಂದು ಬೆಳಿಗ್ಗೆ 11ಕ್ಕೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ರ‌್ಯಾಲಿಗೆ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಚಾಲನೆ ನೀಡುವರು. ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಹಿರಂಗ ಸಭೆ ನಡೆಸಲಾಗುತ್ತದೆ ಎಂದು ವೇದಿಕೆ ಮುಖಂಡ ಚಂದ್ರಶೇಖರ ತೋರಣಘಟ್ಟ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನೂತನವಾಗಿ ರಚಿಸಿರುವ ಪಠ್ಯಪುಸ್ತಕದಲ್ಲಿ ವೈದಿಕ ಸಂಸ್ಕೃತಿಯನ್ನು ವೈಭವೀಕರಿಸಲಾಗಿದೆ. ಭಾರತದ ಜಾತಿ ವ್ಯವಸ್ಥೆಗೆ ಧಕ್ಕೆ ತರುವ ವಿಷಯ ಸೇರಿಸಲಾಗಿದೆ. ಅನ್ಯಧರ್ಮದ ಮೇಲೆ ದ್ವೇಷ ಭಾವನೆ ಬಿತ್ತುವ ಕೆಲಸ ನಡೆದಿದೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಸೈಯದ್ ಇಸ್ಮಾಯಿಲ್, ಬಳ್ಳಾರಿ ಪುರುಷೋತ್ತಮ್, ಫಾಸ್ಟರ್ ಇಮಾನ್ಯುಯಲ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.