ಬುಧವಾರ, ಜೂನ್ 16, 2021
23 °C
ಮೇಯರ್‌, ಉಪಮೇಯರ್‌ ಆಯ್ಕೆ 7ರಂದು

ಪಾಲಿಕೆ: ಲೆಕ್ಕಾಚಾರಗಳ ಮೇಲಾಟ

ಭೀಮಸೇನ ಚಳಗೇರಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಮೇಯರ್‌ ಮತ್ತು ಉಪ ಮೇಯರ್‌ ಆಯ್ಕೆ ಇದೇ 7ರಂದು ಮುಹೂರ್ತ ನಿಗದಿ ಯಾಗುತ್ತಿದ್ದಂತೆಯೇ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳೆಯದಲ್ಲಿ ಲೆಕ್ಕಾಚಾರ ಆರಂಭಗೊಂಡಿದೆ.ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ನೀಡದ ಮತದಾರನ ತೀರ್ಪಿನಿಂದಾಗಿ, ಯಾರೇ ಅಧಿಕಾರದ ಗದ್ದುಗೆ ಏರಬೇಕೆಂದರೂ ಮತ್ತೊಂದು ಪಕ್ಷದ ಸಹಾಯ ಬೇಕೇಬೇಕು ಎನ್ನುವ ಪರಿಸ್ಥಿತಿ ಇದೆ. ಈ ‘ಸಹಾಯ’ ನೇರವಾಗಿ ಬೆಂಬಲ ರೂಪದಲ್ಲಿ ಇರಬಹುದು ಇಲ್ಲವೇ ಬಲಾಬಲ ಪ್ರದರ್ಶನ ಸಂದರ್ಭದಲ್ಲಿ ಗೈರು ಹಾಜರಾಗುವ ಮೂಲಕವು ವ್ಯಕ್ತವಾಗಬಹುದು.ವಿರೋಧ ಪಕ್ಷವಾಗಲು ಸಿದ್ಧ: ‘ನಿಚ್ಚಳ ಬಹುಮತ ಇಲ್ಲದ ಕಾರಣ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಪಕ್ಷ ಸಿದ್ಧವಾಗಿದೆ. ವಾಮ ಮಾರ್ಗ ಹಿಡಿದು ಅಧಿಕಾರ ಪಡೆದು ಕೊಳ್ಳಬೇಕು ಎಂಬ ಧಾವಂತ ನಮಗಿಲ್ಲ’ ಎಂದು ಮಾಜಿ ಮೇಯರ್‌ ಹಾಗೂ ಹಾಲಿ ಸದಸ್ಯ ಡಾ.ಪಾಂಡುರಂಗ ಪಾಟೀಲ ಸ್ಪಷ್ಟಪಡಿಸುತ್ತಾರೆ.‘ಜೆಡಿಎಸ್‌ ಸದಸ್ಯರೇ ಬೆಂಬಲ ನೀಡಲು ಮುಂದೆ ಬಂದರೆ ಮತ್ತೆ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿಯಬಹುದು. ಆಗಲೂ ಅವರಿಗೆ ನಿರಾಸೆ ಇರುವುದಿಲ್ಲ. ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಬಹುದು. ಮುಂದಿನ ಕೆಲ ಅವಧಿಗೆ ಉಪಮೇಯರ್ ಅಧಿಕಾರ ಅನುಭವಿಸ ಬಹುದು’ ಎಂದೂ ಅಭಿಪ್ರಾಯಪಡುತ್ತಾರೆ.‘ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೇ ಆದರೆ, ಜೆಡಿಎಸ್‌ಗೆ ಯಾವ ಅಧಿಕಾರವೂ ಸಿಗುವುದಿಲ್ಲ. ಹೀಗಾಗಿ ಮೇಯರ್‌–ಉಪಮೇಯರ್ ಚುನಾವಣೆ ಯಲ್ಲಿ ಜೆಡಿಎಸ್‌ ಜಾಣ ನಡೆಯೇ ನಿರ್ಣಾಯಕ ವಾಗಲಿದೆ’ ಎಂದು ವಿಶ್ಲೇಷಿಸುತ್ತಾರೆ. ‘ಒಂದು ವೇಳೆ ಜೆಡಿಎಸ್‌ ಹಾಗೂ ಒಬ್ಬ ಪಕ್ಷೇತರ ಸದಸ್ಯನ ಬೆಂಬಲ ಪಡೆದರೂ ಕಾಂಗ್ರೆಸ್‌ನ ಒಟ್ಟು ಬಲ 38 ಆಗಲಿದೆ. ಬಿಜೆಪಿಯ ಬಲವೂ 38. ಅಂತಹ ಸಂದರ್ಭದಲ್ಲಿ ಚೀಟಿ ಎತ್ತುವ ಮೂಲಕ ಮೇಯರ್‌ ಅವರನ್ನು ಆಯ್ಕೆ ಮಾಡ ಬೇಕಾಗುತ್ತದೆ. ಹೀಗಾಗಿ ಮೇಯರ್‌ ಯಾರಾಗಬೇಕು ಎಂಬ ಬಗ್ಗೆ ಈಗ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಪ್ರತಿಕ್ರಿಯಿ ಸುತ್ತಾರೆ.ಇನ್ನು, ಬಿಜೆಪಿಯ ಇತರ ಕೆಲ ಸದಸ್ಯರು ಹೇಳುವುದೇ ಬೇರೆ. ಧಾರವಾಡದಿಂದ ಶಿವು ಹಿರೇಮಠ (ವಾರ್ಡ್‌ ನಂ. 17), ವಿಜಯಾನಂದ ಶೆಟ್ಟಿ (ವಾ.ನಂ. 13), ಮಲ್ಲಿಕಾರ್ಜುನ ಹೊರಕೇರಿ (ವಾ.ನಂ. 24) ಹಾಗೂ ರಾಮಣ್ಣ ಬಡಿಗೇರ (37) ಪ್ರಬಲ ಆಕಾಂಕ್ಷಿಗಳಾ ಗಿದ್ದಾರೆ. ಹುಬ್ಬಳ್ಳಿಯ ಸದಸ್ಯರ ಪೈಕಿ ಮಾಜಿ ಮೇಯರ್ ವೀರಣ್ಣ ಸವಡಿ (33) ಹಾಗೂ ಸುಧೀರ್ ಸರಾಫ್‌ (52) ಅವರ ಹೆಸರು ಕೇಳಿ ಬರುತ್ತಿವೆ. ಆದರೆ, ಸಾಮಾನ್ಯ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಾಗಿರು ವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಆದರೆ, ಜೆಡಿಎಸ್‌ ಬೆಂಬಲ ನೀಡಲು ನಿರ್ಧರಿಸಿದಾಗ ಈ ಬೆಳವಣಿಗೆ ಕಂಡುಬರಬ ಹುದು ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಸದಸ್ಯರೊಬ್ಬರು ಹೇಳುತ್ತಾರೆ. ಈ ಮಧ್ಯೆ, ಪಾಂಡು ರಂಗ ಪಾಟೀಲರನ್ನೇ ಮತ್ತೆ ಮೇಯರ್‌ ಸ್ಥಾನದಲ್ಲಿ ಕುಳ್ಳಿರಿಸುವ ಬಗ್ಗೆಯೂ ಚರ್ಚೆ ನಡೆದಿದೆ.ಇಂದು ಸಭೆ..

‘ಮೇಯರ್ ಆಯ್ಕೆ ಸಂಬಂಧ ಚರ್ಚಿಸಲು ಇದೇ 3ರಂದು ಪಕ್ಷದ ಸದಸ್ಯರ ಸಭೆ ಕರೆಯ ಲಾಗಿದೆ’ ಎಂದು  ಕಾಂಗ್ರೆಸ್‌ ಹುಬ್ಬಳ್ಳಿ–ಧಾರವಾಡ ಮಹಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘4ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ನಗರಕ್ಕೆ ಆಗಮಿಸಲಿದ್ದು, ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಪಾಲಿಕೆ ಸದಸ್ಯರ ಅಭಿಪ್ರಾಯಗಳನ್ನು ಮಂಡಿಸಿ, ಅಂತಿಮ ತೀರ್ಮಾನಕ್ಕೆ ಬರಲಾಗು ವುದು’ ಎಂದೂ ಸ್ಪಷ್ಟಪಡಿಸಿದರು. ಇನ್ನು, ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ ಅವರು, ‘ಮೇಯರ್‌ ಚುನಾವಣೆ ಕುರಿತಂತೆ ನಮ್ಮ ಅಧ್ಯಕ್ಷರನ್ನೇ ಕೇಳಿ’ ಎಂದು ಚುಟುಕಾಗಿ ಉತ್ತರಿಸಿದರು.ಹೊರಟ್ಟಿ ಹೆಗಲಿಗೆ: ಮೇಯರ್ ಚುನಾವಣೆ ಕುರಿತಂತೆ ಪಕ್ಷದ ನಿಲುವು ಏನಿರಬೇಕು ಎಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಪಕ್ಷದ ಮುಖಂಡ, ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರಿಗೆ ನೀಡಲಾಗಿದೆ ಎಂದು ಜೆಡಿಎಸ್‌ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.