ಪಾಲಿಕೆ ಸದಸ್ಯನ ವಿರುದ್ಧ ಜಾತಿ ನಿಂದನೆ ಪ್ರಕರಣ

7

ಪಾಲಿಕೆ ಸದಸ್ಯನ ವಿರುದ್ಧ ಜಾತಿ ನಿಂದನೆ ಪ್ರಕರಣ

Published:
Updated:

ಬೆಂಗಳೂರು: ಬೈರಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯ ನಾಗರಾಜ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ನಾಗರಾಜ್ ವಿರುದ್ಧ ದೂರು ದಾಖಲಿಸಿರುವ ಬೈರಸಂದ್ರ ನಿವಾಸಿ ಬಿ.ಇ.ದಾಸಪ್ಪ ಎಂಬುವರು, `ನಾಗರಾಜ್ ನನ್ನ ಜಾತಿ ಹೆಸರನ್ನು ಬಳಸಿ ನಿಂದಿಸಿದ್ದಾರೆ~ ಎಂದು ಆರೋಪಿಸಿದ್ದಾರೆ.ಬಿಬಿಎಂಪಿ ಚುನಾವಣೆ ವೇಳೆ ಬೈರಸಂದ್ರ ವಾರ್ಡ್‌ನಿಂದ ಸ್ಪರ್ಧಿಸಿದ್ದ ನಾಗರಾಜ್ ಪರವಾಗಿ ದಾಸಪ್ಪರ ಕುಟುಂಬ ಪ್ರಚಾರ ಮಾಡಿದ್ದರು. ಮಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವಂತೆ ನಾಗರಾಜ್‌ರನ್ನು ಕೋರಿದ್ದರು. ಈ ನೆಪದಲ್ಲಿ ಮಗಳನ್ನು ಮನೆಗೆ ಕರೆಸಿ ನಾಗರಾಜ್ ಅನುಚಿತವಾಗಿ ವರ್ತಿಸಿದ್ದರು~ ಎಂದು ದಾಸಪ್ಪ ಅವರು `ಪ್ರಜಾವಾಣಿ~ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry