ಪಾಲಿಟೆಕ್ನಿಕ್ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲ

7

ಪಾಲಿಟೆಕ್ನಿಕ್ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲ

Published:
Updated:

ಬೆಂಗಳೂರು: ಡಿಪ್ಲೊಮಾ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಮೂರು ದಿನಗಳಾಗಿವೆ. ಆದರೆ ಕೆಲವು ಖಾಸಗಿ ಪಾಲಿಟೆಕ್ನಿಕ್‌ಗಳು ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆಯ ಅಂಕಗಳನ್ನು ನಿಗದಿತ ವೇಳೆಯಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡದ ಕಾರಣ 77 ಪಾಲಿಟೆಕ್ನಿಕ್‌ಗಳ ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲ ಉಂಟಾಗಿದೆ.ಫಲಿತಾಂಶ ಪ್ರಕಟಣೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸುವ ದೃಷ್ಟಿಯಿಂದ ಮೊದಲ ಬಾರಿಗೆ ಆಂತರಿಕ ಅಂಕಗಳನ್ನು ನೇರವಾಗಿ ಆಯಾ ಪಾಲಿಟೆಕ್ನಿಕ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮಂಡಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲ ಖಾಸಗಿ ಪಾಲಿಟೆಕ್ನಿಕ್‌ಗಳು ಹೊಸ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಆ ಪ್ರಕಾರ ಮಂಡಳಿಗೆ ಅಂಕಗಳನ್ನು ಕಳುಹಿಸಿಕೊಟ್ಟಿಲ್ಲ. ಹೀಗಾಗಿ ಫಲಿತಾಂಶ ವಿಳಂಬವಾಗಿದೆ.ಶನಿವಾರ ಮಂಡಳಿಯು ಫಲಿತಾಂಶ ಪ್ರಕಟಿಸಿದ ನಂತರ ಕೆಲವು ಪಾಲಿಟೆಕ್ನಿಕ್‌ಗಳಿಗೆ ಫಲಿತಾಂಶ ಪಟ್ಟಿ ತಲುಪದೆ ಇದ್ದಾಗ ಈ ಲೋಪವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಈ ಲೋಪವನ್ನು ಸರಿಪಡಿಸುವ ಕೆಲಸ ನಡೆದಿದೆ. ಈಗ 69 ಪಾಲಿಟೆಕ್ನಿಕ್‌ಗಳ ಆಂತರಿಕ ಅಂಕಗಳು ಆನ್‌ಲೈನ್ ಮೂಲಕ ಅಪ್‌ಲೋಡ್ ಆಗಿದ್ದು, ಮಂಗಳವಾರದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಇನ್ನುಳಿದ ಎಂಟು ಪಾಲಿಟೆಕ್ನಿಕ್‌ಗಳು ಮಂಗಳವಾರ ಆಂತರಿಕ ಅಂಕಗಳನ್ನು ಅಪ್‌ಲೋಡ್ ಮಾಡಲಿದ್ದು, ಗುರುವಾರದ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ತಾಂತ್ರಿಕ ಶಿಕ್ಷಣ ಮಂಡಳಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry