ಪಾಲಿಟೆಕ್ನಿಕ್ ವಿದ್ಯಾರ್ಥಿನಿ ಆತ್ಮಹತ್ಯೆ

7

ಪಾಲಿಟೆಕ್ನಿಕ್ ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:

ದಾವಣಗೆರೆ: ಫಲಿತಾಂಶದಲ್ಲಿ ಪ್ರಥಮ ಸ್ಥಾನ ದೊರೆಯಲಿಲ್ಲ ಎಂದು ಬೇಸರಗೊಂಡ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ನಗರದ ಎಸ್.ಎಸ್. ಬಡಾವಣೆಯಲ್ಲಿ ಶನಿವಾರ ನಡೆದಿದೆ.

ಬಾಪೂಜಿ ಪಾಲಿಟೆಕ್ನಿಕ್ ಅಂತಿಮ ವರ್ಷದ ನೇಹಾನಾಜ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆಕೆ ಟೆಕ್ಸ್‌ಟೈಲ್ಸ್ ವಿಭಾಗದಲ್ಲಿ ಅಂತಿಮ ಸೆಮಿಸ್ಟರ್ ಕಲಿಯುತ್ತಿದ್ದು, ಶುಕ್ರವಾರ ಐದನೇ ಸೆಮಿಸ್ಟರ್ ಫಲಿತಾಂಶ ಬಂದಿದೆ. ಪ್ರತಿ ಬಾರಿಯೂ ಕಾಲೇಜಿಗೆ ಪ್ರಥಮ ಇದ್ದು, ಈ ಸೆಮಿಸ್ಟರ್‌ನಲ್ಲಿ ಪ್ರಥಮ ಸ್ಥಾನಕ್ಕಿಂತ ನಾಲ್ಕು ಅಂಕ ಕಡಿಮೆ ಬಂದಿವೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಮಹಮದ್ ರಫೀಕ್ ಮಾನ್ವಿಯ ಗ್ರಾಮಿಣ ಬ್ಯಾಂಕ್ ಉದ್ಯೋಗಿ. ತಾಯಿ ದಿಲ್‌ಶಾದ್ ಬೇಗಂ ಹರಿಹರ ತಾಲ್ಲೂಕು ಭಾನುವಳ್ಳಿಯಲ್ಲಿ ಶಿಕ್ಷಕಿ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಾಗ ಮನೆಯಲ್ಲಿ 70 ವರ್ಷದ ಅಜ್ಜಿ ಮಾತ್ರ ಇದ್ದರೆಂದು ತಿಳಿದುಬಂದಿದೆ. ಪ್ರಕರಣ ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry