ಶನಿವಾರ, ಮೇ 15, 2021
22 °C

ಪಾಳುಬಿದ್ದ ಆಸ್ಪತ್ರೆ ಕಟ್ಟಡ

ಪ್ರಜಾವಾಣಿ ವಾರ್ತೆ/ ಮಂಡಿಕಲ್ ಪುರುಷೋತ್ತಂ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ನಂಗಲಿ ಗ್ರಾಮದಲ್ಲಿ 1962ರಲ್ಲಿ ನೆರೆಯ ಗ್ರಾಮದ ಗಡ್ಡೂರಿನ ದಾನಿಗಳಾದ ಗುರಪ್ಪರೆಡ್ಡಿ ಅವರು ತಮ್ಮ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಕಟ್ಟಡ ಕಟ್ಟಿಸಿಕೊಟ್ಟಿದ್ದರು. ಆದರೆ ಕಟ್ಟಡ ಬಳಕೆಯಾಗದೆ ಪಾಳುಬಿದ್ದಿದೆ.ಗುರುಪ್ಪ ತಮ್ಮ ಸ್ವಂತ ನಿವೇಶನದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗ ಲೆಂದು ಸರ್ಕಾರಿ ಆಸ್ಪತ್ರೆಗೆ ಕಟ್ಟಡ ನಿರ್ಮಿಸಿ ಇಲಾಖೆಗೆ ಹಸ್ತಾಂತರ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಈ ನಿವೇಶನದ ಇಂದಿನ ಮಾರುಕಟ್ಟೆ  ಬೆಲೆಯಲ್ಲಿ ಕೋಟಿ ರೂಪಾಯಿಗೆ ಹೆಚ್ಚು. ಸಮೀಪದಲ್ಲಿರುವ ಸರ್ಕಾರಿ ಆಸ್ಪತ್ರೆ ಕಟ್ಟಡ ಕಿರಿದಾಗಿದ್ದರೂ ಅಲ್ಲಿಯೇ ಆಸ್ಪತ್ರೆ ನಡೆಯುತ್ತಿದೆ. ಆದರೆ ದಾನಿಯೊಬ್ಬರು ಸದುದ್ದೇಶದಿಂದ ಕಟ್ಟಿಸಿದ ಕಟ್ಟಡ ನಿರ್ಲಕ್ಷಕೊಳಗಾಗಿದೆ.ಉಪಯೋಗಿಸದ ಕಾರಣ ಕಟ್ಟಡ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಾಟಾಗಿದೆ. ನಂಗಲಿ ಗ್ರಾಮ ಆಂಧ್ರಪ್ರದೇಶದ ಗಡಿಯಲ್ಲಿದೆ. ಈ ಭಾಗದಲ್ಲಿ ರಸ್ತೆ ಅಪಘಾತ ಹೆಚ್ಚು. ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ದೂರದ ಕೋಲಾರ ಆಸ್ಪತ್ರೆಗೆ ಸಾಗಿಸಬೇಕು. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಈ ಕಟ್ಟಡ ಉಪಯೋಗಿಸಿ ಬಹುದಾಗಿತ್ತು ಎಂಬುದು ಗ್ರಾಮದ ಸುಬ್ರಮಣ್ಯಂ ಅಭಿಪ್ರಾಯ.ಅಲ್ಲದೆ ಸುತ್ತಮುತ್ತಲ 76 ಗ್ರಾಮ ಗಳಿಗೆ ಆಸರೆಯಾಗಿರುವ ಸರ್ಕಾರಿ ಆಸ್ಪತ್ರೆಗೆ ಕಟ್ಟಡ ತುಂಬ ಅವಶ್ಯಕ ಎಂದು ಗ್ರಾಮಸ್ಥರು ಹೇಳುತ್ತಾರೆ. ನಮ್ಮ ಹಿರಿಯರು ಸದ್ದುದೇಶದಿಂದ ಕಟ್ಟಿಸಿದ ಆಸ್ಪತ್ರೆ ಕಟ್ಟಡ ನೋಡಲು ನೋವಾಗುತ್ತದೆ ಎಂದು ಗುರಪ್ಪರೆಡ್ಡಿ ಅವರ ಮಗ ತಾಲ್ಲೂಕು ಬೋರ್ಡ್ ಮಾಜಿ ಅಧ್ಯಕ್ಷ ಜಿ. ಹನುಮಂತರೆಡ್ಡಿ ಅಳಲು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.