ಪಾಳೇಗಾರಿಕೆ ಕೊನೆಗೊಳ್ಳಲಿ

7

ಪಾಳೇಗಾರಿಕೆ ಕೊನೆಗೊಳ್ಳಲಿ

Published:
Updated:

ಡಬ್ಬಿಂಗ್ ನಿಷೇಧ ಆಯ್ಕೆ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುತ್ತದೆ. ಡಬ್ಬಿಂಗ್ ಅವಕಾಶದಿಂದ ತಕ್ಷಣಕ್ಕೆ ಕೆಲವರಿಗೆ ಹಿನ್ನಡೆಯಾಗಬಹುದು, ಆದರೆ ಸಮರ್ಥರು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಅದನ್ನು ಖಂಡಿತ ಎದುರಿಸಿ ಮೇಲೇಳುತ್ತಾರೆ. ಕಂಪ್ಯೂಟರ್ ಬರುವಾಗಲೂ ನೌಕರರು ಬೀದಿಗೆ ಬೀಳುವ ಮಾತು ಬಂದಿರಲಿಲ್ಲವೇ!

ಈಗ ಅದೇ ನೌಕರರು ಕಂಪ್ಯೂಟರ್ ಕಲಿತು ಇನ್ನೂ ಹೆಚ್ಚಿನ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡಬ್ಬಿಂಗ್‌ನಿಂದ ಸ್ಪರ್ಧೆ ಏರ್ಪಾಡಾಗುತ್ತದೆ. ಸ್ಪರ್ಧೆ ಗುಣಮಟ್ಟವನ್ನು ಸುಧಾರಿಸುತ್ತದೆ. ಕಾಳುಗಳನ್ನು ಜೊಳ್ಳಿನಿಂದ ಬೇರ್ಪಡಿಸುತ್ತದೆ. ಮೇಲಾಗಿ ಡಬ್ಬಿಂಗ್‌ನಿಂದ ಕನ್ನಡದ ಮನರಂಜನೆಯ ವ್ಯಾಪ್ತಿ ಹೆಚ್ಚಾಗುತ್ತದೆ. ಮನರಂಜನೆಗೂ ಕನ್ನಡಕ್ಕೂ ಇರುವ ನಂಟು ಇನ್ನಷ್ಟು ಗಟ್ಟಿಗೊಳ್ಳುತ್ತದೆ.

ವಿವಿಧ ರೀತಿಯ ಹೊಸ ಹೊಸ ಪ್ರಯೋಗಗಳಿಗೆ ನಾಂದಿ ಹಾಡುತ್ತದೆ. ಕನ್ನಡಿಗರಲ್ಲಿರುವ ಕನ್ನಡತನ ಇನ್ನಷ್ಟು ಗಟ್ಟಿಯಾಗುತ್ತದೆ. ಕನ್ನಡ ಗೊತ್ತಿಲ್ಲದವರು ಕೂಡ ಮನರಂಜನೆಯ ಮೂಲಕ ಕನ್ನಡ ಕಲಿಯುವಂತಾಗುತ್ತದೆ. ಡಬ್ಬಿಂಗ್ ಅವಕಾಶದಿಂದ ಕನ್ನಡ ಮನರಂಜನೆಯ ಕ್ಷೇತ್ರವೇ ಕುಸಿದುಬಿಡುತ್ತದೆ ಅಥವಾ ಡಬ್ ಮಾಡಿದ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಿಬಿಡುತ್ತವೆ ಎನ್ನುವುದು ಊಹೆಗೂ ನಿಲುಕದ ಮಾತಾಗಿದೆ.

ಕೊನೆಗೆ ಪ್ರೇಕ್ಷಕ ತನಗೇ ಇಷ್ಟವಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಸದಭಿರುಚಿಯುಳ್ಳ, ಜನರಿಗೆ ತಲುಪುವ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಒಟ್ಟಿನಲ್ಲಿ ಡಬ್ಬಿಂಗ್ ನಿಷೇಧದ ಸುತ್ತಮುತ್ತ ಕೆಲವರು ಕಟ್ಟಿಕೊಂಡಿರುವ ಪಾಳೇಗಾರಿಕೆ ಕೊನೆಗೊಳ್ಳಲಿ.  ಎಲ್ಲ ಬಗೆಯ ಮಾಹಿತಿ, ಮನರಂಜನೆ ಕನ್ನಡಿಗರಿಗೆ ಕನ್ನಡದಲ್ಲೇ ಸಿಗುವಂತಾಗಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry