ಪಾವಗಡದಲ್ಲಿ ಹತ್ತು ದಿನಕ್ಕೊಮ್ಮೆ ನೀರು!

7

ಪಾವಗಡದಲ್ಲಿ ಹತ್ತು ದಿನಕ್ಕೊಮ್ಮೆ ನೀರು!

Published:
Updated:
ಪಾವಗಡದಲ್ಲಿ ಹತ್ತು ದಿನಕ್ಕೊಮ್ಮೆ ನೀರು!

ಪಾವಗಡ: ಪಾಪಿ ಸಮುದ್ರ ಹೊಕ್ಕರು ಮೊಳಕಾಲು ಉದ್ದ ನೀರು ಎನ್ನುವಂತೆ ಕೋಟ್ಯಂತರ ಹಣ ಸುರಿದರೂ ಪಾವಗಡ ಪಟ್ಟಣದ ಜನತೆಗೆ ಹತ್ತು ದಿನಗಳಿಗೊಮ್ಮೆ ನೀರು ಎಂಬಂತಾಗಿದೆ.ಲಕ್ಷಾಂತರ ರೂಪಾಯಿ ಸುರಿದು ಉತ್ತರ ಪಿನಾಕಿನಿ ನದಿಗೆ ಹಾಕಿರುವ ಬ್ಯಾರೇಜ್‌ನಲ್ಲಿ ನೀರು ಲಭ್ಯವಿದ್ದರೂ ನೀರು ಶೋಧಿಸುವ ಯಂತ್ರಗಳನ್ನು ಅಳವಡಿಸದ ಕಾರಣ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.ಮಾಜಿ ಸಚಿವ ವೆಂಕಟರಮಣಪ್ಪ ಅವರು ರೂ. 18 ಲಕ್ಷದಲ್ಲಿ ನಾಗಲಮಡಿಕೆ ಬಳಿ ಹರಿಯುವ ಉತ್ತರ ಪಿನಾಕಿನ ನದಿಗೆ ಅಡ್ಡಲಾಗಿ ಬ್ಯಾರೇಜ್ ಕಟ್ಟಿಸಿ ನಾಲ್ಕು ವರ್ಷ ಕಳೆದರೂ ನೀರು ಬರಲಿಲ್ಲ. ಆಗ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ 10 ಕೊಳವೆ ಬಾವಿಗಳನ್ನು ಕೊರೆಸಿ ಆ ಕೊಳವೆ ಬಾವಿಗಳ ನೀರನ್ನು ಜಾಕ್‌ವೆಲ್‌ಗೆ ತುಂಬಿಸಿ, ಪಾವಗಡಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಈಗ ಬ್ಯಾರೇಜು ನೀರು ರಾಡಿಯಾಗಿರುವುದರಿಂದ 10 ತಿಂಗಳಿಂದ ನೀರು ಸರಬರಾಜು ಮಾಡುತ್ತಿಲ್ಲ.ಈ ಹಿಂದೆ ನದಿ ಪಾತ್ರದಲ್ಲಿ ಹಾಕಿಸಿದ್ದ ಕೊಳವೆ ಬಾವಿಗಳ ನೀರನ್ನು ಪಾವಗಡಕ್ಕೆ ಸರಬರಾಜು ಮಾಡಬೇಕು. ಪಾವಗಡ ಪಟ್ಟಣಕ್ಕೆ ಸರಬರಾಜು ಮಾಡುತ್ತಿರುವ ಕೊಳವೆ ಬಾವಿಗಳ ನೀರಿನೊಂದಿಗೆ ನಾಗಲಮಡಿಕೆ ಕೊಳವೆ ಬಾವಿಗಳ ನೀರನ್ನು ಸೇರಿಸಿದರೆ ಪಾವಗಡ ಪಟ್ಟಣಕ್ಕೆ ವಾರಕ್ಕೊಮ್ಮೆಯಾದರೂ ನೀರು ಕೊಡಬಹುದು. ಪುರಸಭೆ ಈ ಬಗ್ಗೆ ಕಾರ್ಯೋನ್ಮಖವಾಗಬೇಕು ಎಂದು ಪಟ್ಟಣದ ಜನತೆ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry