ಶುಕ್ರವಾರ, ಜೂನ್ 18, 2021
28 °C

ಪಾವತಿಯಾಗದ ಹಣ: ರೈತರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಸರ್ಕಾರ ಬೆಂಬಲ ಬೆಲೆಯಲ್ಲಿ ಬತ್ತ ಖರೀದಿ ಮಾಡಿತ್ತು. ರೈತರು ಬತ್ತ ಕೊಟ್ಟು ಎರಡು ತಿಂಗಳಾಗುತ್ತಿದ್ದರೂ ಇನ್ನೂ ಹಣ ಪಾವತಿಯಾಗಿಲ್ಲ. ಸಾಲ ಮಾಡಿ ಕಟಾವು ಮಾಡಿದ್ದ ಸಣ್ಣ ರೈತರ ಸ್ಥಿತಿ ಡೋಲಾಯಮಾನವಾಗಿದೆ. ಇದರ ನಡುವೆ ಖರೀದಿಯನ್ನೂ ನಿಲ್ಲಿಸಿರುವು ದರಿಂದ ಇನ್ನೂ ಬತ್ತ ನೀಡದ ಕೆಲ ರೈತರು ತೊಂದರೆಗೆ ಸಿಲುಕಿದ್ದಾರೆ.ತಾಲ್ಲೂಕಿನಲ್ಲಿ ಬೆಂಬಲ ಬೆಲೆಗೆ ಬತ್ತ ಖರೀದಿಸುವ ದಿಸೆಯಲ್ಲಿ ಖರೀದಿ ಕೇಂದ್ರವನ್ನು ಜನವರಿ 9 ರಂದು ಆರಂಭಿಸಲಾಗಿತ್ತು. ಇದಕ್ಕಾಗಿ ಪಟ್ಟಣದ ತಾಲ್ಲೂಕು ವ್ಯವಸಾಯೋ ತ್ಪನ್ನ ಮಾರಾಟ ಸಹಕಾರ ಸಂಘದ ಗೋದಾಮನ್ನು ಆಯ್ಕೆ ಮಾಡಿಕೊಂಡು ಇಲ್ಲಿ ದಾಸ್ತಾನು ಮಾಡಿಕೊಳ್ಳ ಲಾಗಿತ್ತು.ಇದರ ಹಿಂದೆ ಪಕ್ಕದ ಸಂತೆಮರಹಳ್ಳಿ ಖರೀದಿ ಕೇಂದ್ರಕ್ಕೆ ಕೆಲವು ರೈತರು ತಾವು ಬೆಳೆದ ಬತ್ತವನ್ನು ಕೊಟ್ಟಿದ್ದರು, ಆದರೆ ಇದುವರೆಗೆ ರೈತರಿಗೆ ಪಾವತಿಯಾಗಬೇಕಾದ ಹಣ ಇನ್ನೂ ಪಾವತಿಯಾಗಿರದ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪಟ್ಟಣದ ಗೋದಾಮು ಸೇರಿದಂತೆ ಒಟ್ಟು 15 ಸಾವಿರ ಕ್ವಿಂಟಲ್ ಬತ್ತದ ದಾಸ್ತಾನಿದೆ. ಇದಕ್ಕೆ ಇನ್ನೂ ಹಣ ಪಾವತಿಯಾಗಿಲ್ಲ.`200 ಕ್ವಿಂಟಲ್ ಬತ್ತವನ್ನು ಬೆಳೆದಿದ್ದೇನೆ, ಗೋಣಿ ಚೀಲಕ್ಕೆ 9 ಸಾವಿರ ರೂಪಾಯಿ ಬಂಡವಾಳ ಹಾಕಿದ್ದೇನೆ. ಮೂಟೆಯೊಂದಕ್ಕೆ 10 ರೂಪಾಯಿ ಕೂಲಿ ಕೊಟ್ಟಿದ್ದೇನೆ. ಹಾಗೂ 10 ರೂಪಾಯಿ ವಾಹನ ವೆಚ್ಚ ತಗುಲಿದೆ. ಇದರ ಜೊತೆಗೆ ಬತ್ತ ಕೊಯ್ಯುವ ಯಂತ್ರಕ್ಕೆ ಹಣ ನೀಡಿದ್ದೇನೆ. ಇದರ ನಡುವೆ ಇಲ್ಲೂ ಸಹ ಮೂಟೆಯೊಂದಕ್ಕೆ 3 ಕೆ.ಜಿ. ಬತ್ತವನ್ನು ಕಳೆಯುತ್ತಿದ್ದಾರೆ. ಹಾಗಿದ್ದರೂ ಇನ್ನೂ ಹಣ ಪಾವತಿಯಾಗಿಲ್ಲ. ಇಷ್ಟೆಲ್ಲ ಬಂಡವಾಳವನ್ನು ಸಾಲ ಮಾಡಿಯೇ ಹಾಕಿರುವುದರಿಂದ ತಮಗೆ ತೊಂದರೆಯಾಗುತ್ತಿದೆ~ ಎಂದು ರೈತ ಪರಶಿವಪ್ಪ ತಮ್ಮ ಅಳಲು ತೋಡಿಕೊಂಡರು.ಈ ಬಗ್ಗೆ ಖರೀದಿ ಅಧಿಕಾರಿ ಸಿದ್ಧಗಂಗೇಗೌಡ ಹೇಳುವಂತೆ `ಪಟ್ಟಣದಲ್ಲಿರುವ ಗೋದಾಮು ತುಂಬಿದೆ. ಇಲ್ಲಿ ಬತ್ತವನ್ನು ತುಂಬಲು ಜಾಗವಿಲ್ಲದಿರುವುದರಿಂದ ಖರೀದಿ ಮಾಡುತ್ತಿಲ್ಲ. ಈಗಿರುವ ದಾಸ್ತಾನು ಮಾರುವ ಕುರಿತು ಜಿಲ್ಲಾಮಟ್ಟದಲ್ಲಿ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ವಹಿಸಲಾಗುವುದು. ಮೂಟೆ ಒಂದಕ್ಕೆ ಎರಡು ಕೆ. ಜಿ. ಬತ್ತವನ್ನು ಮಾತ್ರ ಕಳೆಯಲಾಗುತ್ತಿದ್ದು ಇದರಲ್ಲಿ 1.250 ಗ್ರಾಂ. ಚೀಲದ ಲೆಕ್ಕಕ್ಕೆ ಹಾಗೂ 750 ಗ್ರಾಂ. ವೇಸ್ಟೇಜ್ ಕಳೆಯುತ್ತಿದ್ದಾರೆ~ ಎಂದು ಅವರು ತಿಳಿಸಿದರು.`ಈ ಹಿಂದೆ ಖರೀದಿ ಕೇಂದ್ರ ಉದ್ಘಾಟಿಸಲು ಬಂದಿದ್ದ ಆಹಾರ ನಿರ್ದೇಶಕರು ಹೋಬಳಿ ಮಟ್ಟದಲ್ಲೂ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಭರವಸೆ ನೀಡಿದ್ದರು. ಆದರೆ ಇಲ್ಲಿನ ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ಇರುವುದಿಲ್ಲ. ದೂರವಾಣಿ ಕರೆ ಮಾಡಿದರೂ ಅವರು ಕೈಗೆ ಸಿಗುತ್ತಿಲ್ಲ. ಹಣ ಯಾವಾಗ ದೊರೆಯುತ್ತದೆ ಎಂಬ ಭರವಸೆಯೇ ಇಲ್ಲವಾಗಿದ್ದು ನಮಗೆ ಆತಂಕವಾಗಿದೆ.ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರೂ ತತ್ಸಾರ ಮನೋಭಾವ ತೋರುತ್ತಿರುವುದು ಸರಿಯಲ್ಲ~ ಎಂದು ರೈತರಾದ ಶಿವಮಲ್ಲಪ್ಪ, ನಾಗೇಂದ್ರಪ್ಪ, ಲಿಂಗರಾಜಮೂರ್ತಿ ದೂರುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.