ಪಾಶ್ಚಾತ್ಯರ ಅನುಕರಣೆ ಬೇಡ

7

ಪಾಶ್ಚಾತ್ಯರ ಅನುಕರಣೆ ಬೇಡ

Published:
Updated:

ಧಾರವಾಡ:  `ಇಂದು ದೇಶ ಹಾಗೂ ಸಮಾಜ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ನಾವು ಪಾಶ್ಚಾತ್ಯ ಮಾದರಿಯ ಜೀವನದ ಅನುಕರಣೆಗೆ ಕೊಡುತ್ತಿರುವ ಪ್ರಾಧಾನ್ಯತೆಯೇ ಮುಖ್ಯ ಕಾರಣ~ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಜೆ.ಎಸ್. ಪಾಟೀಲ ಹೇಳಿದರು.ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಮಹಿಳೆ, ಮಕ್ಕಳ ಸಾಗಾಣಿಕೆ ನಿರ್ಮೂಲನೆ ಹಾಗೂ ಬಾಲ್ಯವಿವಾಹ ನಿಷೇಧ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

 

ಪ್ರಸಕ್ತ ವ್ಯವಸ್ಥೆಯ ಬದಲಾವಣೆಗೆ ನಮ್ಮ ದೃಷ್ಟಿಕೋನ ಅಮೂಲಾಗ್ರವಾಗಿ ಬದಲಾ ಗಬೇಕು. ಅಪರಾಧಕ್ಕೆ ಶಿಕ್ಷಕೆಯು ಮುಖ್ಯ ವಾದರೂ ಅದು ಜರುಗದಂತೆ ನಾವು ಎಚ್ಚರ ವಹಿಸುವುದು ಉತ್ತಮ ಕೆಲಸ ಎಂದರು.ಮಹಿಳೆಯನ್ನು ದೇವತೆ ಎಂದು ಪೂಜಿಸುವ ಈ ದೇಶದಲ್ಲಿ ಸ್ವಾತಂತ್ರ್ಯ ನಂತರವೂ ಮಹಿಳೆಯರ ದೌರ್ಜನ್ಯ ಪ್ರಕರಣಗಳ ಹಾಗೂ ಕಾನೂನು ಪರಿಹಾರ ನೀಡುವ ಕುರಿತು ಮಾತನಾಡುವ ಪರಿಸ್ಥಿತಿ ಇರುವುದು ಖೇದಕರ ಎಂದರು.ಜಿಲ್ಲಾಧಿಕಾರಿ ದರ್ಪಣ ಜೈನ್ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಪ್ರಚಲಿತ ಇರುವ ಇಂಥ ಪಿಡುಗಗಳ ಮೂಲ ಕಾರಣದ ಬಗೆಗೆ ಅಧ್ಯಯನ ನಡೆಯಬೇಕು. ವೈವಿಧ್ಯತೆಯ ಈ ದೇಶ ಹಾಗೂ ನಾಡಿನಲ್ಲಿ ಸಾಮಾಜಿಕ ಅನಿಷ್ಟಗಳು, ಸಮಸ್ಯೆಗಳಿಗೆ ತಮ್ಮದೇ ಸ್ಥಳೀಯ ಕಾರಣಗಳು ಇವೆ.ಆದರೆ ಅಮಾನವೀಯವಾದ ಕಾರ್ಯಗಳು ನಡೆಯದಂತೆ ಜನತೆ, ಜನಪ್ರತಿನಿಧಿಗಳು, ಅಡಳಿತ ವ್ಯವಸ್ಥೆ ಹಾಗೂ ಮಾಧ್ಯಮಗಳು ಒಟ್ಟಾರೆಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಪ್ರೇಮಾ ಕೊಮಾರ ದೇಸಾಯಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಶ್ರತಿ, ಪವನ, ರೇವಣಕರ, ಗುರುದೇವಿ ಹಿರೇಮಠ, ಅಲ್ಮಾ ಶಿರೂರ, ದೀಪಕ ಭಜಂತ್ರಿ, ಮೆಹಬೂಬ ಅಲಿ, ಅನನ್ಯ ದಸ್ತವಾಡ, ಸುಜಯ ಶಾನಭಾಗ ಅವರಿಗೆ ತಲಾ 10 ಸಾವಿರ ಊಪಾಯಿ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸರೋಜಿನಿ ಕಡೇಮನಿ ಸ್ವಾಗತಿಸಿದರು. ಬಿ.ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಬಿ. ಮಾಸಮಡ್ಡಿ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry