ಪಾಶ್ಚಾತ್ಯ ಉಡುಗೆ ತಂದ ಸಾವು!

7

ಪಾಶ್ಚಾತ್ಯ ಉಡುಗೆ ತಂದ ಸಾವು!

Published:
Updated:

ರೋಮ್ (ಐಎಎನ್‌ಎಸ್): ಭಾರತೀಯ ಸಂಸ್ಕೃತಿ ವಿರುದ್ಧವಾಗಿ ಪಾಶ್ಚಾತ್ಯ ಉಡುಗೆ ತೊಟ್ಟಳು ಎಂಬ ಕಾರಣಕ್ಕೆ ಅನಿವಾಸಿ ಭಾರತೀಯನೊಬ್ಬ 3 ತಿಂಗಳ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಇಟಲಿಯಲ್ಲಿ ನಡೆದಿದೆ.

ಕೃಷಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಂಗ್ ಜೆ. ಕುಲಬೀರ್ (37), ಪತ್ನಿ ಕೌರ್ ಬಲ್ವಿಂದೆ (27)ಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಪೊ ನದಿಯಲ್ಲಿ ಎಸೆದಿದ್ದ. ಕೌರ್ ನಾಪತ್ತೆಯಾಗಿ 153 ದಿನಗಳ ಬಳಿಕ  ನದಿಯಲ್ಲಿ ಅವಳ ಶವ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೌರ್‌ಳಿಗೆ 5 ವರ್ಷದ ಮಗನಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry