ಪಾಸ್ಕಲ್ ಗೆ ಷರತ್ತು ಬದ್ದ ಜಾಮೀನು

7

ಪಾಸ್ಕಲ್ ಗೆ ಷರತ್ತು ಬದ್ದ ಜಾಮೀನು

Published:
Updated:

ಬೆಂಗಳೂರು (ಪಿಟಿಐ) : ಮಗಳ ಮೇಲೆ ಆತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್‌ಗೆ ರಾಜ್ಯ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.ಕಳೆದ ಮೂರು ತಿಂಗಳಿಂದ ಜೈಲಿನಲ್ಲಿದ್ದ  ಪಾಸ್ಕಲ್‌ಗೆ ಬುಧವಾರ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತು ಬದ್ದ ಜಾಮೀನು  ನೀಡಿತು. ಒಂದು ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಮತ್ತು ಇಬ್ಬರಿಂದ ಅಷ್ಟೇ ಮೊತ್ತದ ಭದ್ರತಾ ಖಾತರಿ ನೀಡುವಂತೆ ಹೈಕೋರ್ಟ್ ಸೂಚಿಸಿತು.ಪಾಸ್ಕಲ್‌ನ ಪಾಸ್‌ಪೋರ್ಟ್‌ನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆಯೂ ಕೋರ್ಟ್ ಆಜ್ಞಾಪಿಸಿತು. ಪೂರ್ವಾನುಮತಿ ಇಲ್ಲದೆ ದೇಶವನ್ನು ಬಿಟ್ಟು ಹೋಗುವುದಾಗಲೀ, ಸಾಕ್ಷ್ಯಾಧಾರಗಳನ್ನು ನಾಶಪಡಿಸುವುದಾಗಲಿ ಮಾಡುವಂತಿಲ್ಲ  ಹಾಗೂ ತನಿಖಾಧಿಕಾರಿಗಳು ಕರೆದಾಗ ಬಂದು  ತನಿಖೆಗೆ ಸಹಕರಿಸಬೇಕು ಎಂಬ ಷರತ್ತುಗಳನ್ನೂ ಹೈಕೋರ್ಟ್ ವಿಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry