ಸೋಮವಾರ, ಮೇ 16, 2022
28 °C

ಪಾಸ್ಕಲ್ ವಿರುದ್ಧ ಕಾನೂನು ಪ್ರಕಾರ ತನಿಖೆ- ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ಪಿಟಿಐ): ಮಗುವಿನ ಮೇಲೆ ಅತ್ಯಾಚಾರ ಎಸಗಿದ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಅಧಿಕಾರಿ ಪಾಸ್ಕಲ್ ಪ್ರಕರಣವನ್ನು ದೇಶದ ಕಾನೂನು ಪ್ರಕಾರ ತನಿಖೆ ಮಾಡಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಎಸ್.ಎಂ.ಕೃಷ್ಣ ಬುಧವಾರ ಹೇಳಿದರು.ಇದರಲ್ಲಿ ಎರಡೂ ಕಡೆಯ ತನಿಖೆಯ ಪ್ರಶ್ನೆಯೇ ಬರುವುದಿಲ್ಲ. ನಮ್ಮ ದೇಶದ ಕಾನೂನು ಪ್ರಕಾರ ತನಿಖೆ ಮಾಡಲಾಗುತ್ತದೆ. ಫ್ರಾನ್ಸ್ ಅಧಿಕಾರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.ಪಾಕ್- ಮಾತುಕತೆ ಅಬಾಧಿತ:
ಪಾಕಿಸ್ತಾನದಲ್ಲಿ ಪ್ರಧಾನಿ ಬದಲಾವಣೆಯಿಂದ ದ್ವಿಪಕ್ಷೀಯ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಸಚಿವ ಕೃಷ್ಣ  ತಿಳಿಸಿದರು.`ಪಾಕ್ ವಿದ್ಯಮಾನವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ~ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.