ಬುಧವಾರ, ಜೂನ್ 16, 2021
26 °C

ಪಾಸ್ವಾನ್‌– ಅಡ್ವಾಣಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಲ್‌ಜೆಪಿ ಮುಖಂಡ ರಾಂ ವಿಲಾಸ್‌ ಪಾಸ್ವಾನ್‌ ಅವರು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರನ್ನು ಶನಿವಾರ ಭೇಟಿ ಮಾಡಿದರು.ಗುಜರಾತ್‌ನಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ 2002ರಲ್ಲಿ ಎನ್‌ಡಿಎ ತೊರೆದಿದ್ದ ಎಲ್‌ಜೆಪಿ ಈಗ ಮತ್ತೆ ಎನ್‌ಡಿಎ ಸೇರುವುದಾಗಿ ಗುರುವಾರ ಘೋಷಣೆ ಮಾಡಿತ್ತು.ಎಲ್‌ಜೆಪಿ ಶಾಸಕ ಜೆಡಿಯು ಸೇರ್ಪಡೆ (ಪಟ್ನಾ ವರದಿ): ಬಿಜೆಪಿ ಜೊತೆ ಮೈತ್ರಿಗೆ ವಿರೋಧಿಸಿದ್ದ ಎಲ್‌ಜೆಪಿ ಶಾಸಕ ಜಾಕೀರ್‌ ಹುಸೇನ್‌ ಆಡಳಿತಾರೂಢ ಜೆಡಿಯುಗೆ  ಸೇರ್ಪಡೆಯಾಗಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಲ್‌ಜೆಪಿ ಮೈತ್ರಿ ಮಾಡಿ­ಕೊಳ್ಳುವ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ ಅರಾರಿಯಾ ಕ್ಷೇತ್ರದ ಶಾಸಕ ಖಾನ್‌ ಗುರುವಾರ ಪಕ್ಷಕ್ಕೆ ರಾಜೀ­ನಾಮೆ ಸಲ್ಲಿಸಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್ ನೇತೃ­ತ್ವದಲ್ಲಿ ಜೆಡಿಯುಗೆ ಸೇರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.