ಪಾಸ್‌ಪೋರ್ಟ್: ಆನ್‌ಲೈನ್ ಸೌಲಭ್ಯ

7

ಪಾಸ್‌ಪೋರ್ಟ್: ಆನ್‌ಲೈನ್ ಸೌಲಭ್ಯ

Published:
Updated:

ವಿದೇಶಗಳಿಗೆ ತೆರಳಲು ಅಗತ್ಯವಾಗಿರುವ ವ್ಯಕ್ತಿಯ ವಿಳಾಸ ದಾಖಲೆ ಆಗಿರುವ ರಹದಾರಿ ಪತ್ರ (ಪಾಸ್‌ಪೋರ್ಟ್) ಪಡೆಯಲು ಗಂಟೆಗಟ್ಟಲೆ, ಬೆಳಗಿನ ಜಾವದಿಂದಲೇ ಪಾಸ್‌ಪೋರ್ಟ್ ಕಚೇರಿಗಳ ಮುಂದೆ ಕಾಯಬೇಕಿಲ್ಲ. ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಡಿಯಲ್ಲಿ ಬರುವ ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ  ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಹೊಸದಾಗಿ ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಣ ಮುಂತಾದ ಸೇವೆಗಳಿಗೆ ಅಭ್ಯರ್ಥಿಗಳು ಕಾಗದದ ಅರ್ಜಿಗಳನ್ನು ತುಂಬಬೇಕಿಲ್ಲ.   ಕಂಪ್ಯೂಟರ್ ಬಳಸಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ದಾಖಲಿಸುವುದು, ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಲು ನಿಗದಿತ ಸಮಯವನ್ನೂ (appointment) ) ಸಹ ತಾವೇ ನಿರ್ಧರಿಸಬಹುದಾಗಿದೆ.ಹೊಸದಾಗಿ ಪಾಸ್‌ಪೋರ್ಟ್ ಪಡೆಯಬೇಕಾದವರು ಅಥವಾ ನವೀಕರಣಗೊಳಿಸಬೇಕಾದವರು ಮೊದಲಿಗೆ ಕೇಂದ್ರ ಸರ್ಕಾರದ ಅಂತರಜಾಲ ತಾಣ www.passportindia.gov.in ನಲ್ಲಿ ಇರುವ ಎಲ್ಲ ಮಾಹಿತಿಯನ್ನು ಓದಿ  ತಿಳಿದುಕೊಳ್ಳಬೇಕು.  ಅದರಲ್ಲಿ ವಿವಿಧ ಸೇವೆಗಳಿಗೆ ಬೇಕಾದ ದಾಖಲೆಗಳು, ನೀಡಬೇಕಾದ ಶುಲ್ಕ, ಪಾಸ್ ಪೋರ್ಟ್ ಪಡೆಯಲು ಇರಬೇಕಾದ ಅರ್ಹತೆ ಮುಂತಾದ  ಮಾಹಿತಿಯನ್ನು ನೀಡಲಾಗಿದೆ.  ಅರ್ಜಿ  ಸಲ್ಲಿಸುವ ವಿಧಾನ

ಮೊದಲಿಗೆ  ತಾವು ಭೇಟಿ ಕೊಡಲಿಚ್ಚಿಸುವ ಸೇವಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಮಂಗಳೂರು ಹಾಗೂ ಹುಬ್ಬಳ್ಳಿಯ ಜೊತೆಗೆ ಬೆಂಗಳೂರಿನಲ್ಲಿ  ಎರಡು ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ನಂತರ  ಅರ್ಜಿದಾರರು ತಮ್ಮ ಹೆಸರನ್ನು ನೋಂದಾಯಿಸಲು ಲಾಗಿನ್ (log-in)  ಆಗಬೇಕು. ಅಂದರೆ ಅದಕ್ಕಾಗಿ ತಮ್ಮದೇ ಆದ ಯಾವುದಾದರೂ ಅಧಿಕೃತ ಇ-ಮೇಲ್ ಐಡಿಯನ್ನು (email-id)  ಬಳಕೆದಾರರ ಹೆಸರಿನಂತೆ (username)   ಆಗಿ ಉಪಯೋಗಿಸಿ ತಮ್ಮ ಸ್ವಂತ ರಹಸ್ಯ ಸಂಖ್ಯೆ (pa­ssword)   ಜೊತೆಗೆ ತಮ್ಮ ಹೆಸರನ್ನು ದಾಖಲಿಸ ಬೇಕಾಗುತ್ತದೆ. ಮುಂದೆ  ಅರ್ಜಿದಾರರು ಪ್ರತಿಬಾರಿ ವೆಬ್-ಸೈಟಿಗೆ ಹೋಗಿ ಯಾವುದೇ ಸೇವೆಗಳನ್ನು ಪಡೆಯಬೇಕಾದಲ್ಲಿ ಇದೇ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಉಪಯೋಗಿಸಿ  ಲಾಗಿನ್ ಮಾಡಬೇಕಾಗುತ್ತದೆ.ಪಾಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಸಲ್ಲಿಸುವವರು, ಲಾಗಿನ್ ಆದಮೇಲೆ, ಪಾಸ್ ಪೋರ್ಟ್ ಅರ್ಜಿಯನ್ನು ತಮ್ಮ ಕಂಪ್ಯೂಟರ್ ಇಳಿಸಿಕೊಳ್ಳಬೇಕು. (download). ಅದು ಎರಡು ಪುಟಗಳನ್ನು ಒಳಗೊಂಡಿದ್ದು  ಆ ಅರ್ಜಿಯನ್ನು   ಆನ್-ಲೈನ್‌ನಲ್ಲಿಯೇ ಭರ್ತಿಮಾಡಬಹುದು ಅಥವಾ ಸಾವಧಾನವಾಗಿ ಆಫ್-ಲೈನ್‌ನಲ್ಲಿ (off-line) ಭರ್ತಿಮಾಡಬಹುದು. ನಿಖರ ಮಾಹಿತಿಯನ್ನು ಸಲ್ಲಿಸುವ ಸಲುವಾಗಿ ಅಥವಾ ಏನಾದರೂ ಬದಲಾವಣೆ ಮಾಡಬೇಕಾದಲ್ಲಿ ಎರಡನೆಯದನ್ನು ಆಯ್ಕೆಮಾಡಿಕೊಳ್ಳುವುದು ಉಚಿತ.ಎರಡನೆಯ ಪುಟದ ಕೊನೆಯಲ್ಲಿ ಅರ್ಜಿಯನ್ನು ಅರ್ಜಿದಾರನು ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ  validate and save 

ಗುಂಡಿ ಒತ್ತಿ ಅರ್ಜಿಯನ್ನು ಪಾಸ್‌ಪೋರ್ಟ್ ವೆಬ್-ಸೈಟಿಗೆ ಅಪ್-ಲೋಡ್ (upload)    ಮಾಡಬೇಕಾಗುತ್ತದೆ. ಅರ್ಜಿಯು ಅಪ್-ಲೋಡ್ ಆದ ಮೇಲೆ, ಅದು ಪಿಡಿಎ್ ೈಲ್‌ನಿಂದ ಎಕ್ಸ್ ಎಮ್ ಎಲ್ ೈಲ್ (.xml file) ಆಗಿ ಪರಿವರ್ತನೆಗೊಂಡು ಅರ್ಜಿದಾರನು ಸೂಚಿಸಿದ ಕಡೆ ಅವನ ಕಂಪ್ಯೂಟರ್‌ನಲ್ಲಿ  ದಾಖಲಾಗುತ್ತದೆ.  ನಂತರ ಈ  .xml file ಅನ್ನು ಲಾಗಿನ್ ಮಾಡಿ, ವೆಬ್ ಸೈಟಿಗೆ ಅಪ್-ಲೋಡ್ (upload)  ಮಾಡಬೇಕಾಗುತ್ತದೆ. ಅರ್ಜಿಯು ದಾಖಲಾಗಿದ್ದಕ್ಕಾಗಿ ಇಲಾಖೆಯು  ಅರ್ಜಿಯ ಸ್ವೀಕೃತಿ ಪತ್ರವನ್ನು  (Application Receipt) ನೀಡುತ್ತದೆ. ಈ ಸ್ವೀಕೃತಿ ಪತ್ರವನ್ನು  ಹಾಗೂ ತಾನು  ಸಲಿಸ್ಲಿದ ಅರ್ಜಿಯನ್ನು  (.pdf file)  ಅರ್ಜಿದಾರನು ಮುದ್ರಿಸಿಕೊಳ್ಳಬಹುದು (print)  ಹಾಗೂ ತನ್ನ ಕಂಪ್ಯೂಟರ್‌ನಲಿ ್ಲಇಟ್ಟುಕೊಳ್ಳಬಹುದು.ಪ್ರತಿಯೊಂದು ಹಂತದಲ್ಲಿಯೂ ಎಚ್ಚರಿಕೆಯನ್ನು ವಹಿಸಿ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತದೆ ಹಾಗೂ ನಂತರ ಏನಾದರೂ ಬದಲಾವಣೆ ಕಂಡುಬಂದಲ್ಲಿ ಅದನ್ನು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋದಾಗ ಮಾತ್ರ ಮಾಡಬೇಕಾಗುತ್ತದೆ.ಅರ್ಜಿಯ ಜೊತೆಗೆ ಅರ್ಜಿದಾರನು ತನ್ನ ಬಳಿಯಿರುವ ಪೂರಕ ದಾಖಲೆಗಳನ್ನೂ (supporting docum­ents) ಸಹ ಅಪ್-ಲೋಡ್ ಮಾಡಬಹುದು. ಅಥವಾ, ಅದನ್ನು ತಾನೇ ಸ್ವತಃ ಸೇವಾ ಕೇಂದ್ರದಲಿ ್ಲಸಲಿಸ್ಲಬಹುದು. ಇನ್ನು ಅರ್ಜಿಯನ್ನು ಸಾಮಾನ್ಯ ಅಥವಾ ತತ್ಕಾಲ್ ಯೋಜನೆಯಡಿಯಲಿಯ್ಲೂ (ಹೆಚ್ಚಿನ ಶುಲ್ಕದೊಂದಿಗೆ) ದಾಖಲಿಸಬಹುದಾಗಿದೆ.  ಪಾಸ್‌ಪೋರ್ಟ್‌ಗಾಗಿ ತನ್ನ ಅರ್ಜಿಯನ್ನು ತಾನು ಆಯ್ದುಕೊಂಡ ಸೇವಾ ಕೇಂದ್ರದ ವೆಬ್-ಸೈಟಿನಲ್ಲಿ ದಾಖಲಿಸಿದ ಬಳಿಕ, ಪಾಸ್‌ಪೋರ್ಟ್ ಪಡೆಯಲು ಬೇಕಾದ ಇತರ ಪ್ರಕ್ರಿಯೆಗಳನ್ನು ಪೂರೈಸಲು, ಖುದ್ದಾಗಿ ಸೇವಾ ಕೇಂದ್ರಕ್ಕೆ ಹಾಜರಾಗಬೇಕಾಗುತ್ತದೆ.ಈ ರೀತಿಯಲ್ಲಿ ಪೂರ್ವಭಾವಿಯಾಗಿ ಅಪಾಯಿಂಟ್‌ಮೆಂಟ್ ಪಡೆಯದಿದ್ದರೆ, ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಯಾವುದೇ ಸೇವೆಗಳನ್ನು ಒದಗಿಸುವುದಿಲ್ಲ  ಈ ಎಲ್ಲಾ ಕೇಂದ್ರಗಳಲ್ಲೂ ಸೋಮವಾರದಿಂದ ಶುಕ್ರವಾರದವರೆಗೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ, ಅರ್ಧ ಗಂಟೆ ಕಾಲಾವಧಿಯ ಹಲವಾರು ನಿಗದಿತ ವೇಳೆಗಳನ್ನು((Appointment Time) ) ಗೊತ್ತುಪಡಿಸಲಾಗಿದೆ. ಈ ನಿಗದಿತ ದಿನಾಂಕ ಹಾಗೂ  ವೇಳೆಗಳ  ಆಯ್ಕೆಯನ್ನು,  ಅರ್ಜಿದಾರನು ಪಾಸ್‌ಪೋರ್ಟ್ ವೆಬ್-ಸೈಟಿಗೆ ಲಾಗಿನ್ ಆಗಿ Manage­ Appointment ಅಯ್ಕೆಯನ್ನು ಮಾಡಿಕೊಂಡು,  ಒಂದೂವರೆ ದಿನದ ಮೊದಲು ಪಡೆಯಬಹುದಾಗಿದೆ. ಅಂದರೆ, ಬುಧವಾರ ಅಪಾಯಿಂಟ್‌ಮೆಂಟ್ ಯಾವುದೇ ಸಮಯಕ್ಕೆ ಪಡೆಯಬೇಕಾದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಲಾಗಿನ್ ಮಾಡಬೇಕಾಗುತ್ತದೆ. ಈ ಅಪಾಯಿಂಟ್‌ಮೆಂಟ್  ಪಡೆಯಲು ಸಾಕಷ್ಟು ಜನರಿರುವುದರಿಂದ ಹಾಗೂ ಲಭ್ಯವಿರುವ ಅಪಾಯಿಂಟ್‌ಮೆಂಟ್‌ಗಳು ಕಡಿಮೆಯಾಗಿರುವುದರಿಂದ, ಸುಮಾರು 7 ಗಂಟೆಯ ಹೊತ್ತಿಗೇ ಎಲ್ಲಾ ಅಪಾಯಿಂಟ್‌ಮೆಂಟ್‌ಗಳೂ ಭರ್ತಿಯಾಗುತ್ತವೆ. ಪುನಃ ಅದನ್ನು ಪಡೆಯಲು ಮರುದಿನ ಸಂಜೆ 6 ರವರೆಗೆ ಕಾಯಬೇಕಾಗುತ್ತದೆ. ಅರ್ಜಿದಾರನು ತನಗೆ ಬೇಕಾದ ಹಾಗೂ ಲಭ್ಯವಿರುವ  ಅಪಾಯಿಂಟ್‌ಮೆಂಟ್ ವೇಳೆಯನ್ನು ದಾಖಲಿಸಿದ  ನಂತರ, ಇಲಾಖೆಯು ಅದನ್ನು ದೃಢೀಕರಿಸಿ ಬಾರ್‌ಕೋಡ್(barcode)  ಉಳ್ಳ  ಅಪಾಯಿಂಟ್‌ಮೆಂಟ್ ರಸೀತಿಯನ್ನು  (Online Application Receipt)  ನೀಡುತ್ತದೆ. ಅದನ್ನು ಅರ್ಜಿದಾರನು  Print Application Receipt

ಆಯ್ಕೆಯ ಮೂಲಕ  ಮುದ್ರಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿ ಅರ್ಜಿದಾರನ ಹೆಸರು, ಅಪಾಯಿಂಟ್‌ಮೆಂಟ್ ನೀಡಿರುವ ದಿನಾಂಕ, ಸಮಯದ ಜೊತೆಗೆ ಅರ್ಧ ಗಂಟೆ ಮುಂಚಿತವಾಗಿ ಅರ್ಜಿದಾರನು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪ್ರವೇಶಿಸ ಬೇಕಾದ ಸಮಯದ ಮಾಹಿತಿಯನ್ನು ನೀಡಲಾಗಿರುತ್ತದೆ. 

(ಮುಂದಿನ ವಾರ ಎರಡನೆ ಕಂತು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry