ಬುಧವಾರ, ಆಗಸ್ಟ್ 21, 2019
27 °C

ಪಿಂಚಣಿ ಅದಾಲತ್: ಅವ್ಯವಸ್ಥೆಗಳ ಆಗರ

Published:
Updated:

ಮುದಗಲ್ಲ: ತಾಲ್ಲೂಕಿನ ಮುದಗಲ್ಲ ಪಟ್ಟಣದಲ್ಲಿ ಸೋಮವಾರ ಕಂದಾಯ ಇಲಾಖೆ ಆಯೋಜಿಸಿದ್ದ ಪಿಂಚಣಿ ಅದಾಲತ್ ನಡೆಯುತ್ತದೆ ಎಂದು ಗ್ರಾಮಗಳಿಗೆ ಸಮರ್ಪಕ ಮಾಹಿತಿ ನೀಡದಿರುವುದನ್ನು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಯಿತು.ಮುದಗಲ್ಲಿನಲ್ಲಿ ಈಚೆಗೆ ಪಿಂಚಣಿ ಅದಾಲತ್ ಆಯೋಜಿಸಲಾಗಿತ್ತು. ಬ್ಯಾನರ್‌ನಲ್ಲಿ ಲಿಂಗಸುಗೂರ ಹೋಬಳಿ ಅಂತಾ ಇದೆ. ಸ್ಥಳ ನಾಡ ತಹಸೀಲ್ದಾರ ಕಚೇರಿ ಆವರಣ ಬರೆಯುವಲ್ಲಿ ಮುದಗಲ್ಲ ಹೋಬಳಿ ಆವರಣ ಎಂಬಿತ್ಯಾದಿ ತಪ್ಪುಗಳ ಬ್ಯಾನರ್ ಹಾಗೂ ಜನತೆಗೆ ಸಮರ್ಪಕ ಮಾಹಿತಿ ನೀಡದಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದ ಪ್ರಸಂಗವು ನಡೆಯಿತು.ತಹಶೀಲ್ದಾರ್ ಜಿ.ಎಸ್. ಮಹಾಜನ್ ದಲಿತ ಮುಖಂಡರನ್ನು ಮನವೊಲಿಸಿ ಬರುವ ದಿನಗಳಲ್ಲಿ ಸಮರ್ಪಕ ಮಾಹಿತಿ ನೀಡುವ ಭರವಸೆ ನೀಡಿದರು. ಮಾಸಾಶನ ರದ್ದುಗೊಂಡ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಮನವಿ ಮಾಡಿದರು. ಅರ್ಜಿ ಸ್ವೀಕರಿಸಲು ಗ್ರಾಮ ಲೆಕ್ಕಾಧಿಕಾರಿಗಳು ಇರದೇ ಇರುವುದರಿಂದ ಮಧ್ಯವರ್ತಿಗಳು ಅರ್ಜಿ ಸ್ವೀಕರಿಸಿ ಅಧಿಕಾರಿಗಳಿಗೆ ಸಹಕರಿಸಿದರು.ಮಾಸಾಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿ ಜೊತೆಗೆ ಮಧ್ಯವರ್ತಿಗಳು ಹಣ ಪಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನೆ ಕುಳಿತಿರುವುದು ಕಂಡುಬಂತು. ಈ ಕುರಿತು ದಲಿತ ಸಂಘರ್ಷ ಸಮಿತಿ ಮುಖಂಡ ವೆಂಕಟೇಶ ಹಿರೇಮನಿ ಪಿಂಚಣಿ ಅದಾಲತ್ ಗೊಂದಲ ಗೂಡಾಗಿದೆ. ಸಮರ್ಪಕ ಮಾಹಿತಿ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ಕಾಟಾಚಾರ ಅದಾಲತ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Post Comments (+)