ಬುಧವಾರ, ಜುಲೈ 15, 2020
22 °C

ಪಿಂಚಣಿ ನಿಧಿ: ಶೇ 9.5ರಷ್ಟು ಬಡ್ಡಿ ಪಾವತಿಸಲು ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಂಚಣಿ ನಿಧಿ: ಶೇ 9.5ರಷ್ಟು ಬಡ್ಡಿ ಪಾವತಿಸಲು ಅಸ್ತು

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) 4.7 ಕೋಟಿಗಳಷ್ಟು ಠೇವಣಿದಾರರಿಗೆ 2010-11ನೇ ಹಣಕಾಸು ವರ್ಷದಲ್ಲಿ ಶೇ 9.5ರಷ್ಟು ಬಡ್ಡಿ ನೀಡಲು ಹಣಕಾಸು ಸಚಿವಾಲಯವು ಸಮ್ಮತಿ ನೀಡಿದೆ.ಪಿಂಚಣಿ ನಿಧಿ ಠೇವಣಿದಾರರಿಗೆ 2005-06ರಿಂದ ಇದುವರೆಗೆ ಶೇ 8.5ರಷ್ಟು ಬಡ್ಡಿ ಪಾವತಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಬಡ್ಡಿ ದರವನ್ನು ಶೇ 9.5ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. ನಿಧಿಯ ಬಳಿ ರೂ 1,731 ಕೋಟಿಗಳಷ್ಟು ಹೆಚ್ಚುವರಿ ಹಣ ಇರುವುದರಿಂದ ಬಡ್ಡಿ ದರ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿತ್ತು.ಆರಂಭದಲ್ಲಿ ಈ ಶಿಫಾರಸಿಗೆ ಹಣಕಾಸು ಸಚಿವಾಲಯವು ಆಕ್ಷೇಪ ದಾಖಲಿಸಿತ್ತು. ಆದರೆ, ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಹಸ್ತಕ್ಷೇಪದ ಫಲವಾಗಿ ಸಮ್ಮತಿ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.ಹಣಕಾಸು ಸಚಿವಾಲಯವು ಶೇ 9.5ರಷ್ಟು ಬಡ್ಡಿ ಪಾವತಿಸಲು ಅನುಮೋದನೆ ನೀಡಿರುವ ಅಧಿಸೂಚನೆ ನಮ್ಮ ಕೈಸೇರಿದೆ ಎಂದು ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಸಮಿರೇಂದ್ರ ಚಟರ್ಜಿ, ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಬಡ್ಡಿ ಅಮಾನತು ಖಾತೆಯಲ್ಲಿ ್ಙ 1,731 ಕೋಟಿಗಳಷ್ಟು ಹೆಚ್ಚುವರಿ ಮೊತ್ತ ಇರುವ ನಮ್ಮ ಲೆಕ್ಕಾಚಾರವು  ಸರಿಯಾಗಿದೆ ಎನ್ನುವ ತೀರ್ಮಾನಕ್ಕೆ  ಬಂದಿರುವ ಹಣಕಾಸು ಸಚಿವಾಲಯವು,  ಗರಿಷ್ಠ ಪ್ರಮಾಣದ ಈ (ಶೇ 9.5) ಬಡ್ಡಿ ದರ ಪಾವತಿಸಲು ಸಮ್ಮತಿಸಿದೆ. ಮುಂದಿನ 6 ತಿಂಗಳಲ್ಲಿ ‘ಇಪಿಎಫ್‌ಒ’ದ ಚಂದಾದಾರರ ಸಂಖ್ಯೆ ನವೀಕರಿಸಲೂ  ಹಣಕಾಸು ಸಚಿವಾಲಯ ಕೇಳಿಕೊಂಡಿದೆ  ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.