ಬುಧವಾರ, ಮಾರ್ಚ್ 3, 2021
19 °C

ಪಿಂಚಣಿ ಹೆಚ್ಚಳಕ್ಕೆ ದೇವದಾಸಿಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಂಚಣಿ ಹೆಚ್ಚಳಕ್ಕೆ ದೇವದಾಸಿಯರ ಆಗ್ರಹ

ಬಾಗಲಕೋಟೆ: ಮಹಿಳಾ ಅಭಿವೃದ್ಧಿ ನಿಗಮದಿಂದ ನೀಡಿದ ಸಾಲ ಮನ್ನಾ ಮಾಡಬೇಕು ಮತ್ತು ವಯೋಮಿತಿ ಭೇದವಿಲ್ಲದೇ ಎಲ್ಲ ದೇವದಾಸಿಯರಿಗೆ ₨ 1500 ಮಾಸಿಕ ಪಿಂಚಣಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ಜಿಲ್ಲೆಯ ಮಾಜಿ ದೇವ ದಾಸಿಯರು ಬೃಹತ್‌ ಪ್ರತಿಭಟನೆ ನಡೆಸಿದರು.ಜ್ಯೋತಿ ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆ ನೇತೃತ್ವದಲ್ಲಿ ನವನಗರದ      ಜಿಲ್ಲಾ ಡಳಿತ ಭವನದ ಮುಂಭಾಗ ಸೋಮ ವಾರ ಪ್ರತಿಭಟನೆ ನಡೆಸಿದ ಮಾಜಿ ದೇವದಾಸಿಯರು, ಸರ್ಕಾರ ದೇವ ದಾಸಿಯರಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು ‘ಮಾಸಿಕ ಸಹಾಯ ಧನ’ವೆಂದು ಕರೆಯಬೇಕು ಎಂದು ಮನವಿ ಮಾಡಿದರು.ಎಲ್ಲ ದೇವದಾಸಿಯರಿಗೆ ತಲಾ ಎರಡು ಎಕರೆ ಜಮೀನು ನೀಡಬೇಕು, ದೇವದಾಸಿ ಪುನರ್ವಸತಿ ಯೋಜನೆ ಯನ್ನು ಖಾಸಗೀಕರಣ ಮಾಡದೇ ಅದನ್ನು ಸೂಕ್ತ ನೆರವು ನೀಡಿ ಬಲ ಗೊಳಿಸಬೇಕು ಎಂದು ಒತ್ತಾಯಿಸಿದರು.ದೇವದಾಸಿ ಪುನರ್ವಸತಿ ಯೋಜನೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಕರಿಗೆ ಕನಿಷ್ಠ ₨ 3000 ಗೌರವಧನ ಮತ್ತು ಪ್ರಯಾಣಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.ದೇವದಾಸಿ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸ ಲಾತಿ ನೀಡಬೇಕು, ಆಶ್ರಯ ಯೋಜ ನೆಯಡಿ ಮನೆ ಕಟ್ಟಿಕೊಳ್ಳಲು ನಿವೇಶನ ಇಲ್ಲದ ದೇವದಾಸಿಯರಿಗೆ ಸರ್ಕಾರ ಜಾಗ ಒದಗಿಸಬೇಕು ಎಂದು  ಒತ್ತಾಯಿ ಸಿದರು.ಮಾಜಿ ದೇವದಾಸಿ ಮಹಿಳೆಯರ ರಾಜ್ಯ ಸಂಘಟನೆಯ ಉಪಾಧ್ಯಕ್ಷೆ ಕಲ್ಲವ್ವ ಕಾಗಿ, ರಾಜ್ಯ ಜಂಟಿ  ಕಾರ್ಯದರ್ಶಿ ಮುದಕವ್ವ ಜಾನಮಟ್ಟಿ, ಯಲ್ಲವ್ವ ಮಾದರ, ಗ್ಯಾನವ್ವ ಛಲವಾದಿ, ಫಕೀರವ್ವ ಮಾದರ, ಚಂದ್ರವ್ವ ಬಣ ದಾರ, ಗಂಗವ್ವ ಮಾದರ,  ಎಂಆರ್‌ ಎಚ್‌ಎಸ್‌ನ ರಾಜ್ಯ ಪ್ರಧಾನ ಕಾರ್ಯ ದರ್ಶಿ ಪರಶುರಾಮ ಮರೇಗುದ್ದಿ, ಜಿಲ್ಲಾ ಘಟಕದ ಅಧ್ಯಕ್ಷ ಸೋಮು ಚೂರಿ, ಸಂತೋಷ ನಾಟಿಕಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.