ಶನಿವಾರ, ಮೇ 21, 2022
25 °C

ಪಿಇಎಸ್ ಪ್ರಕಲ್ಪದ ಸೃಜನಶೀಲತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಇಎಸ್ ಸಂಸ್ಥೆಯ ತಾಂತ್ರಿಕ ಉತ್ಸವ `ಪ್ರಕಲ್ಪ~ ವಿದ್ಯಾರ್ಥಿಗಳ ಪ್ರತಿಭೆ, ಕ್ರಿಯಾಶೀಲತೆ ಮತ್ತು ವೈಜ್ಞಾನಿಕ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು.ಬನಶಂಕರಿ ಕ್ಯಾಂಪಸ್‌ನಲ್ಲಿ ನಿರ್ಮಿಸಲಾದ 70 ಪ್ರದರ್ಶನ ಮಳಿಗೆಗಳಲ್ಲಿ ಪೆಸಿಟ್ ಮತ್ತು ಪಿಇಎಸ್ ಸ್ಕೂಲ್ ಆಫ್ ಎಂಜಿಯರಿಂಗ್‌ನ ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ಕಲ್ಪನೆಗಳಿಂದ ಕೂಡಿದ ಯೋಜನೆಗಳು, ಆಲೋಚನೆಗಳು, ಸೃಜನಶೀಲತೆ ಮತ್ತು ಸಾಮರ್ಥ್ಯ ಪ್ರದರ್ಶಿಸಿದರು.ಉದ್ಯಮ ವಲಯದ ಇಪ್ಪತ್ತು ಪ್ರಮುಖರೂ ಪಾಲ್ಗೊಂಡು ವಿದ್ಯಾರ್ಥಿಗಳ ಬೆನ್ನು ತಟ್ಟಿದರು. ಪಿಇಎಸ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಗೆ ತಮ್ಮ ಔದ್ಯಮಿಕ ಕೌಶಲ್ಯವನ್ನು ತೋರ್ಪಡಿಸಲು ಇದೊಂದು ವೇದಿಕೆಯೂ ಸಹ ಆಗಿತ್ತು.ವೈರ್‌ಲೆಸ್ ಮೂಲಕ ಟ್ರಾನ್ಸ್‌ಫಾರ್ಮರ್ ಸಂರಕ್ಷಣೆ ಯೋಜನೆಗಾಗಿ ಅಭಿಷೇಕ್ ಗುಪ್ತಾ ಮತ್ತು ವೈರ್‌ಲೆಸ್ ಬಿಲ್ಲಿಂಗ್‌ಗಾಗಿ ದಿಶಾ ದೀಪ್ ಮೊದಲನೆಯ ಬಹುಮಾನಕ್ಕೆ ಪಾತ್ರರಾದರು.

 

ಫೋನೋ ಕಾರ್ಡಿಯೋಗ್ರಾಮ್ ಬಳಸಿ ಹೃದಯ ರೋಗಗಳನ್ನು ಗುರುತಿಸುವ ಅಕ್ಷತಾ ಐತಾಳ್ ಮತ್ತು ಐಶ್ವರ್ಯ ಎಸ್ ಕಂಗತ್ ಅವರ ಯೋಜನೆಗೆ ಎರಡನೇ ಬಹುಮಾನ, ಆ್ಯಕ್ಟಿವ್ ನಾಯ್ಸ ಕಂಟ್ರೋಲ್‌ಗಾಗಿ ಅಖಿಲಾ ಪಿ, ಕಾಮಿನಿ ಕೆ.ಜೆ ಮತ್ತು ಜಾಹ್ನವಿ ಕೆ.ಆರ್ ಮೂರನೇ ಬಹುಮಾನವನ್ನು ಪಡೆದರು. ಕೆ.ಪಿ.ನಾಗಾರ್ಜುನ್ ಅವರಿಗೆ ಲೇಸರ್ ರೈಟರ್ ಫಾರ್ ಫ್ಯಾಬ್ರಿಕೇಷನ್ ಆಫ್ ಎಂಇಎಂಎಸ್ ಯೋಜನೆಗೆ ವಿಶೇಷ ಬಹುಮಾನ ನೀಡಲಾಯಿತು.ಮಾನಸ ಎಂ ಮತ್ತು ಅಂಥೋನಿ ಜೋಸೆಫ್ (ತಾಂತ್ರಿಕ ಪರಿಣಾಮ), ಅಲಿಅಸ್ಗರ್ (ದ್ವಿಚಕ್ರ ವಾಹನಗಳ ಸ್ವಯಂ ಸಮತೋಲನೆ), ಎಂ. ನಿಸರ್ಗ, ಸುಹಾಸ್ ಭಾರದ್ವಾಜ್ ಮತ್ತು ವಿನಯ್ ಕೆ.ಎನ್ (ದೃಷ್ಟಿಮಾಂದ್ಯರಿಗಾಗಿ ಧ್ವನಿ ಆಧಾರಿತ ಅಂತರ್ಜಾಲ ಹುಡುಕಾಟದ ಸೌಲಭ್ಯ), ಹರೀಶ್ ಜೆ, ನವನೀತ್ ಕೆಜೆಎಂ, ಅಂಬರೀಶ ಎನ್‌ಟಿ ಮತ್ತು ಕಿರಣ್ ಜಿಎಸ್ (ಕೊಳಚೆ ನೀರು ಬಳಸಿ ಮೈಕ್ರೋಬಿಯಲ್ ಫ್ಯೂಯೆಲ್ ಜೀವಕೋಶಗಳ ರಚನೆ ಮತ್ತು ತಪಾಸಣೆಯ ಪರಿಕಲ್ಪನೆ) ಅವರೂ ಪ್ರಶಸ್ತಿಗೆ ಪಾತ್ರರಾದರು.ಪಿಇಎಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೊ.ಜವಾಹರ್, ಜನರಲ್ ಮೋಟಾರ್ಸ್ ಲ್ಯಾಬ್ ಗ್ರೂಪ್ ನಿರ್ವಾಹಕ ಡಾ. ರಮೇಶ್, ಡೆಲ್ ಪ್ರೋಗ್ರಾಂ ಮ್ಯೋನೇಜರ್  ಡಾ. ರಾಘವ ರಾವ್, ಇಸ್ರೊ ಉಪ ನಿರ್ದೇಶಕ ಡಾ.ನಿಕೊಲಸ್, ಐಎನ್‌ಸಿಐಟಿಇ ಟಿಬಿಐ ನಿರ್ದೇಶಕ ಡಾ.ಬಿಜು ಜಾಕೋಬ್ ಇತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.