ಪಿಎಚ್‌ಡಿಗೆ ಲಂಚ ಪ್ರಾಧ್ಯಾಪಕಿ ಸೆರೆ

7

ಪಿಎಚ್‌ಡಿಗೆ ಲಂಚ ಪ್ರಾಧ್ಯಾಪಕಿ ಸೆರೆ

Published:
Updated:

ಮಂಗಳೂರು: ಸಂಶೋಧನಾ ವಿದ್ಯಾರ್ಥಿನಿಯಿಂದ ಲಂಚ ಪಡೆದ ಆರೋಪದ ಮೇಲೆ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಬಂಧಿತರು.`ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಪ್ರೇಮಾ ಡಿಸೋಜ ಅವರಿಂದ ಅನಿತಾ ರವಿಶಂಕರ್ ಲಂಚ ಕೇಳಿದ್ದರು. ಮಂಗಳವಾರ ವಿದ್ಯಾರ್ಥಿನಿಯಿಂದ 5 ಸಾವಿರ ರೂಪಾಯಿ ಲಂಚ ಪಡೆದ ಬಳಿಕ ಅವರನ್ನು ಕಚೇರಿಯಲ್ಲೇ ಬಂಧಿಸಿದೆವು' ಎಂದು ಮಂಗಳೂರಿನ ಲೋಕಾಯುಕ್ತ ಎಸ್‌ಪಿ ಮೋಹನದಾಸ್ ಸಿ. ಅವರು  ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry