ಸೋಮವಾರ, ಡಿಸೆಂಬರ್ 16, 2019
18 °C
ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್

ಪಿಎನ್‌ಬಿಗೆ ಮಣಿದ ಫೋರ್ಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಎನ್‌ಬಿಗೆ ಮಣಿದ ಫೋರ್ಟಿಸ್

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 4-1ಗೋಲುಗಳಿಂದ ಫೋರ್ಟಿಸ್ ಎದುರು ಗೆಲುವು ಸಾಧಿಸಿದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯಂತ್ 2ನೇ ನಿಮಿಷದಲ್ಲಿ ಗೋಲು ಗಳಿಸಿ ಫೋರ್ಟಿಸ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು.ಹಿನ್ನಡೆ ಅನುಭವಿಸಿದರೂ ಒತ್ತಡಕ್ಕೆ ಒಳಗಾಗದ ಪಿಎನ್‌ಬಿ ಮರು ಹೋರಾಟ ತೋರಿತು. ಯದುವೀರ್ ಸಿಂಗ್ 13ನೇ ನಿಮಿಷದಲ್ಲಿ ಗೋಲು ಗಳಿಸಿ ಪಿಎನ್‌ಬಿಗೆ ಸಮಬಲ ತಂದಿತ್ತರು.ಆ ಬಳಿಕ ರಣಜಿತ್ ಸಿಂಗ್ (39ನೇ ನಿ.), ಶಿವದೀಪ್ ಸಿಂಗ್ (59ನೇ ನಿ.) ಮತ್ತು ಮಿಂಜ್ (64ನೇ ನಿ.) ಗೋಲುಗಳನ್ನು ಗಳಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡದ ಗೆಲುವಿಗೆ ಕಾರಣರಾದರು.ಗುರುವಾರ ನಡೆಯಲಿರುವ ಪಂದ್ಯಗಳಲ್ಲಿ ಐಒಸಿಎಲ್-ಎಎಸ್‌ಸಿ (ಮಧ್ಯಾಹ್ನ 3ಕ್ಕೆ) ಮತ್ತು ಬಿಪಿಸಿಎಲ್-ನಾಮಧಾರಿ (ಸಂಜೆ 4.30ಕ್ಕೆ) ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)