ಪಿಎನ್‌ಬಿ ತಂಡಕ್ಕೆ ಗೆಲುವು

7

ಪಿಎನ್‌ಬಿ ತಂಡಕ್ಕೆ ಗೆಲುವು

Published:
Updated:

ಬೆಂಗಳೂರು: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ 4-1 ಗೋಲುಗಳಿಂದ ಆರ್ಮಿ ಗ್ರೀನ್ ತಂಡವನ್ನು ಸೋಲಿಸಿತು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಜಿತೇಂದರ್ ಸಿಂಗ್ 11ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಅಜಿತೇಶ್ ರಾಯ್ (22ನೇ ನಿ.), ಜಲ್ವೀಂದರ್ ಸಿಂಗ್ (31ನೇ ನಿ.) ಮತ್ತು ಯದುವೀರ್ ಸಿಂಗ್ (61ನೇ ನಿ.) ಚೆಂಡನ್ನು ಗುರಿ ಸೇರಿಸಿದರು.ಇನ್ನೊಂದು ಪಂದ್ಯದಲ್ಲಿ ಐಒಸಿಎಲ್ 5-0ಗೋಲುಗಳಿಂದ ಆರ್ಮಿ ರೆಡ್ ಎದುರು ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ಗುರ್ಜಿಂದರ್ ಸಿಂಗ್ ಹಾಗೂ ಇಂದರ್‌ಜಿತ್ ಸಿಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರು. ಆ ಗೋಲುಗಳು ಕ್ರಮವಾಗಿ 32, 60 ಮತ್ತು 58, 61ನೇ ನಿಮಿಷದಲ್ಲಿ ಬಂದವು. ಇಮ್ರಾನ್ ಖಾನ್ 70ನೇ ನಿಮಿಷದಲ್ಲಿ ಗೋಲು ತಂದಿಟ್ಟು ಐಒಸಿಎಲ್ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry