ಸೋಮವಾರ, ಮಾರ್ಚ್ 1, 2021
20 °C
ಭವಿಷ್ಯನಿಧಿ ಗ್ರಾಹಕರ ಅನುಕೂಲಕ್ಕಾಗಿ ಸಂಘಟನೆಯಿಂದ ಹಲವು ಕ್ರಮ

ಪಿಎಫ್‌: ಮಾಲೀಕರ ಡಿಜಿಟಲ್‌ ಸಹಿ ಕಡ್ಡಾ ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಎಫ್‌: ಮಾಲೀಕರ ಡಿಜಿಟಲ್‌ ಸಹಿ ಕಡ್ಡಾ ಯ

ಹುಬ್ಬಳ್ಳಿ: ‘ಭವಿಷ್ಯನಿಧಿಗೆ ಸಂಬಂಧಿಸಿ­ದಂತೆ ಆನ್‌ಲೈನ್‌ನಲ್ಲಿ ವರ್ಗಾಯಿಸುವ ದಾಖಲೆಗಳು ಉದ್ಯೋಗದಾತರ ಡಿಜಿಟಲ್‌ ಸಹಿ ಹೊಂದಿರುವುದು ಕಡ್ಡಾಯ’ ಎಂದು ಭವಿಷ್ಯನಿಧಿ ಸಂಘಟ­ನೆಯ ಪ್ರಾದೇಶಿಕ ಆಯುಕ್ತ ಎಚ್‌. ಚಂದ್ರಕಾಂತ ಗಡಿಯಾರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ಪಿಎಫ್‌ ಗ್ರಾಹಕರ ಅನುಕೂಲಕ್ಕಾಗಿ ಸಂಘಟನೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್‌ನಲ್ಲಿ ವ್ಯವಹರಿ­ಸು­ವಾಗ ಭವಿಷ್ಯನಿಧಿ ದಾಖಲೆ­ಗಳಿಗೆ ಉದ್ಯೋಗದಾತರ ಡಿಜಿಟಲ್‌ ಸಹಿ ಇದ್ದರೆ, ಅರ್ಜಿಗಳು ತಿರಸ್ಕೃತಗೊಳ್ಳು­ವುದು ತಪ್ಪುತ್ತದೆ.  ಶ್ರೇಣಿ 2 ಮತ್ತು 3ರ ಅಡಿ ಉದ್ಯೋಗದಾತರು ಡಿಜಿಟಲ್‌ ಸಹಿ ಮಾಡುವ ವ್ಯವಸ್ಥೆ ಮಾಡಿಕೊಳ್ಳ­ಬಹುದು. ಮಾನ್ಯತೆ ಪಡೆದ ಏಜೆನ್ಸಿಗಳು ಈ ಸಹಿಗಳಿಗೆ ಅನುಮೋದನೆ ನೀಡು­ತ್ತವೆ. ಹಣ ವರ್ಗಾವಣೆಯೂ ಶೀಘ್ರ ಮತ್ತು ಸುಲಭವಾಗುತ್ತದೆ’ ಎಂದು ಅವರು  ಹೇಳಿದರು.ಹೆಚ್ಚುವರಿ ಅವಧಿ ಕಡಿತ: ‘ಉದ್ಯೋಗ­ದಾತರು, ಉದ್ಯೋಗಿಗಳ ಖಾತೆಗೆ ಭವಿಷ್ಯನಿಧಿ ಹಣ ಜಮಾ ಮಾಡಲು ಪ್ರತಿ ತಿಂಗಳು 15ನೇ ದಿನದವರೆಗೆ ಅವಕಾಶ ನೀಡಲಾಗಿತ್ತು. ತಪ್ಪಿದರೆ, ಮತ್ತೆ ಐದು ದಿನ ಹೆಚ್ಚುವರಿ ಅವಧಿ ನೀಡಲಾಗಿತ್ತು. ಈಗ, ಎಲ್ಲ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುವುದರಿಂದ, ಐದು ದಿನಗಳ ಹೆಚ್ಚುವರಿ ಅವಧಿಯನ್ನು ಕಡಿತಗೊಳಿಸ­ಲಾಗಿದೆ. ಪ್ರತಿ ತಿಂಗಳ 15ನೇ ದಿನದೊಳಗೇ ಹಣ ಜಮಾ ಮಾಡುವು­ದನ್ನು ಕಡ್ಡಾಯ ಮಾಡಲಾಗಿದೆ’ ಎಂದು ಚಂದ್ರಕಾಂತ ಹೇಳಿದರು. ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನೂ ಕಡ್ಡಾಯ ಮಾಡಿರುವುದರಿಂದ ಹಣ ಜಮಾ ಮಾಡುವುದು ಉದ್ಯೋಗದಾತ­ರಿಗೆ ಸುಲಭವಾಗಿದೆ ಎಂದರು.ಯು.ಎ.ಎನ್‌ ಕಡ್ಡಾಯ: 2014 ಜನವರಿಯಿಂದ ಸಾರ್ವತ್ರಿಕ ಖಾತೆ ಸಂಖ್ಯೆ (ಯು.ಎ.ಎನ್‌) ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸಂಖ್ಯೆ­ಯನ್ನು ಹೊಂದಿದ್ದರೆ, ಉದ್ಯೋಗಿಯ ಹಿಂದಿನ ಕಂಪೆನಿಯ ಮಾಲೀಕರು, ಭವಿಷ್ಯನಿಧಿ ದಾಖಲೆಗಳನ್ನು ದೃಢೀಕರಿ­ಸುವ ಅಗತ್ಯವಿಲ್ಲ. ಇದರಿಂದ ಉದ್ಯೋ­ಗಿ­ಗಳಿಗೆ ಅನುಕೂಲವಾಗಿದೆ’ ಎಂದರು.‘ಯು.ಎ.ಎನ್‌ ಸಿಗದಿರುವವರು, ಸಂಘಟನೆಯ ವೆಬ್‌ಸೈಟ್‌ ಮೂಲಕವೂ ಸಾರ್ವತ್ರಿಕ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಸಬಹುದು. ಮೊಬೈಲ್‌ ದೂರವಾಣಿ ಸಂಖ್ಯೆ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ನಮೂದಿಸಿ, ಫೋಟೊ ಅಪ್‌­ಲೋಡ್‌ ಮಾಡಿದರೆ, ನಾಲ್ಕು ದಿನದಲ್ಲಿ ಯು.ಎ.ಎನ್‌ ಪಡೆಯಬಹುದು’ ಎಂದರು.ನಿಧಿ ಆಪ್‌ ಕೆ ನಿಕಟ್‌: ‘ನಿಧಿ ಆಪ್‌ ಕೆ ನಿಕಟ್‌’ ಶೀರ್ಷಿಕೆಯಡಿ, ಪ್ರತಿ ತಿಂಗಳು 10ನೇ ದಿನ ಭವಿಷ್ಯ ನಿಧಿ ಅದಾಲತ್‌ ಹಮ್ಮಿಕೊಳ್ಳಲಾಗುತ್ತಿದೆ. ಉದ್ಯೋಗ­ದಾತರು ಮತ್ತು ಉದ್ಯೋಗಿ­ಗಳು ಪಾಲ್ಗೊಂಡು ಸಮಸ್ಯೆ ಹೇಳಿದರೆ, ಶೀಘ್ರದಲ್ಲಿಯೇ ಪರಿಹರಿಸಲಾಗುವುದು. 10ರಂದು ಸಾರ್ವತ್ರಿಕ ರಜೆ ಇದ್ದರೆ, 11ರಂದು ಅದಾಲತ್‌ ನಡೆಸಲಾಗು­ವುದು ಎಂದು ಅವರು ಹೇಳಿದರು. ಶ್ರೀನಿವಾಸ ಪೂಜಾರಿ, ಶ್ರೀವಲ್ಲಭ ಜೋಶಿ ಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.