ಪಿಎಫ್ ಪಿಂಚಣಿ: ಮೂಡದ ಒಮ್ಮತ

7

ಪಿಎಫ್ ಪಿಂಚಣಿ: ಮೂಡದ ಒಮ್ಮತ

Published:
Updated:

ನವದೆಹಲಿ (ಪಿಟಿಐ): ಉದ್ಯೋಗಿಗಳ ಭವಿಷ್ಯ ನಿಧಿಯಿಂದ ಕನಿಷ್ಠ ಒಂದು ಸಾವಿರ ರೂಪಾಯಿ ನಿವೃತ್ತಿ ವೇತನ ನೀಡುವುದಕ್ಕೆ ಸಂಬಂಧಿಸಿದಂತೆ  600 ಕೋಟಿ ರೂಪಾಯಿಗಳ ವಾರ್ಷಿಕ ವಂತಿಕೆ ವಿಚಾರದಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಮಾಲೀಕರ ಪ್ರತಿನಿಧಿಗಳ ಮಧ್ಯೆ ಬುಧವಾರ ಒಮ್ಮತ ಮೂಡದ ಕಾರಣ ನಿರ್ಧಾರವನ್ನು ಮುಂದೂಡಲಾಗಿದೆ.

ಈ ಯೋಜನೆಗೆ ಅಗತ್ಯವಾದ ಹೆಚ್ಚುವರಿ ಹಣವನ್ನು ಭರಿಸಲು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮಾಲೀಕರ ಪ್ರತಿನಿಧಿಗಳು ಹಿಂದೇಟು ಹಾಕಿದ್ದರಿಂದ ಈ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. 35 ಲಕ್ಷ ಭವಿಷ್ಯನಿಧಿ ಪಿಂಚಣಿದಾರರ ಪೈಕಿ 14 ಲಕ್ಷ ಜನರು ತಿಂಗಳಿಗೆ 500 ರೂಗಿಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದರೆ ಏಳು ಲಕ್ಷ ಜನರು ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಪಂಚಣಿ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry