ಪಿಎಫ್: ಶೇ 8.5 ಬಡ್ಡಿ

7

ಪಿಎಫ್: ಶೇ 8.5 ಬಡ್ಡಿ

Published:
Updated:

ನವದೆಹಲಿ (ಪಿಟಿಐ): ಭವಿಷ್ಯ ನಿಧಿ (ಪಿಎಫ್) ಠೇವಣಿಗೆ ಪ್ರಸಕ್ತ ಸಾಲಿನಲ್ಲಿ (2013-14) ಶೇ 8.5ರಷ್ಟು ಬಡ್ಡಿ ದರ ನಿಗದಿಯಾಗುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಶೀಘ್ರದಲ್ಲೇ ಇದಕ್ಕೆ ಒಪ್ಪಿಗೆ ನೀಡಲಿದ್ದು, ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ಸಾಲಿನಲ್ಲೂ (2012-13) `ಪಿಎಫ್' ಠೇವಣಿಗೆ ಶೇ 8.5ರಷ್ಟು  ಬಡ್ಡಿ ದರ ನೀಡಲಾಗಿತ್ತು. ಪ್ರಸಕ್ತ ವರ್ಷ ಭವಿಷ್ಯ ನಿಧಿ ಠೇವಣಿಗೆ ಶೇ 8.75ರಷ್ಟು ಬಡ್ಡಿ ದರ ನಿಗದಿಪಡಿಸಬೇಕು ಎಂಬ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಹಣಕಾಸು ಸಚಿವಾಲಯ ಇದನ್ನು ಒಪ್ಪಿಲ್ಲ  ಎಂದು ಮೂಲಗಳು ಹೇಳಿವೆ.ಸೆ.23ರಂದು `ಇಪಿಎಫ್‌ಒ' ಸಭೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry