ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಿಗೆ ಶೃದ್ಧಾಂಜಲಿ

7

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಿಗೆ ಶೃದ್ಧಾಂಜಲಿ

Published:
Updated:

ನೆಲಮಂಗಲ: ಇತ್ತೀಚೆಗೆ ನಿಧನರಾದ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕಿಟ್ಟಯ್ಯನ ಪಾಳ್ಯದ ಗಂಗಪ್ಪ ಅವರಿಗೆ ಬ್ಯಾಂಕ್ ವತಿಯಿಂದ ಗುರುವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.ಬ್ಯಾಂಕಿನ ಹಾಲಿ ಅಧ್ಯಕ್ಷ ಕೆ.ಆರ್.ಗುರುಪ್ರಸಾದ್ ಮಾತನಾಡಿ, `ಗಂಗಪ್ಪ ಅವರು ರೈತರ ಸಂಕಷ್ಟಗಳನ್ನು ಅರಿತು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದರು~ ಎಂದು ಸ್ಮರಿಸಿದರು.ಬ್ಯಾಂಕಿನ ನಿರ್ದೇಶಕ ಬ್ಯಾಡರಹಳ್ಳಿ ರಾಜಶೇಖರ್, `ರೈತರ ಪ್ರೀತಿಗೆ ಪಾತ್ರರಾದ ಗಂಗಣ್ಣ ತಾ.ಪಂ. ಸದಸ್ಯರಾಗಿ, ಎರಡು ಅವಧಿಗೆ ಬ್ಯಾಂಕ್ ಅಧ್ಯಕ್ಷರಾಗಿ, ಅನೇಕ ಅವಧಿಗಳಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು~ ಎಂದು ಶ್ಲಾಘಿಸಿದರು.ಬ್ಯಾಂಕಿನ ನಿರ್ದೇಶಕ ಎನ್.ಕೆ.ರಂಗನಾಥ್, ಕೆ.ಬೈರಯ್ಯ, ಗೌರಮ್ಮ , ಉದಯಕುಮಾರ್ ರೈತರೊಂದಿಗೆ ಅವರ ಆತ್ಮೀಯ ಒಡನಾಟವನ್ನು ಸ್ಮರಿಸಿದರು. ಮಾಜಿ ಅಧ್ಯಕ್ಷ ಹರೀಶ್ ಬಾಬು ಸ್ವಾಗತಿಸಿ, ಕಾರ್ಯದರ್ಶಿ ವಿ.ರಾಮಯ್ಯ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry