ಪಿಎಸ್‌ಐ ನೇಮಕ ಪರೀಕ್ಷೆಸಮಸ್ಯೆ

7

ಪಿಎಸ್‌ಐ ನೇಮಕ ಪರೀಕ್ಷೆಸಮಸ್ಯೆ

Published:
Updated:

ಕರ್ನಾಟಕ ಪೊಲೀಸ್ ಇಲಾಖೆ ಕೆ.ಎಸ್.ಐ.ಎಸ್.ಎಫ್, ಐ.ಆರ್.ಬಿ. ಹಾಗೂ ಕೆ.ಎಸ್.ಆರ್.ಪಿ.ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ದೈಹಿಕ ಮತ್ತು ಲಿಖಿತ ಪರೀಕ್ಷೆಗಳಿವೆ.

 

ಮೂರೂ ಹುದ್ದೆಗಳಿಗೆ ಅರ್ಜಿ  ಸಲ್ಲಿಸಿದ ಅಭ್ಯರ್ಥಿಗಳು ಮೂರು ದೈಹಿಕ ಪರೀಕ್ಷೆಗಳ ಪೈಕಿ ಎರಡು ಪರೀಕ್ಷೆಗಳಿಗೆ ಹಾಜರಾಗಬೇಕು. ಇದರಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆಗೆ ಅರ್ಹರು. ಈ ಎಲ್ಲಾ ಪರೀಕ್ಷೆಗಳು ಬೆಂಗಳೂರಿನಲ್ಲಿಯೇ ನಡೆಸುವುದಾಗಿ ಇಲಾಖೆ ತಿಳಿಸಿದೆ.ಮೂರೂ ಹ್ದ್ದುದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗಾಗಿ ಐದು ಸಲ ಬೆಂಗಳೂರಿಗೆ ಹೋಗಿ ಬರಬೇಕಾಗುತ್ತದೆ.  ಬಿಜಾಪುರದಿಂದ ಬೆಂಗಳೂರಿಗೆ ಒಂದು ಸಲ ಹೋಗಿ ಬರಬೇಕೆಂದರೆ ಕನಿಷ್ಠ 1000 ರಿಂದ 1200 ರೂ ಬೇಕಾಗುತ್ತದೆ.ಅಭ್ಯರ್ಥಿಗಳ ಹಿತದೃಷ್ಟಿಯಿಂದ ಉತ್ತರ ಕರ್ನಾಟಕದ ಎರಡು ಜಿಲ್ಲಾ ಕೇಂದ್ರಗಳಲ್ಲಿ ದೈಹಿಕ ಮತ್ತು ಲಿಖಿತ ಪರೀಕ್ಷೆ ನಡೆಸಿದರೆ ನೂರಾರು ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry