ಪಿಎಸ್‌ಐ ಭರ್ತಿ: ತಕರಾರು ವಜಾ

7

ಪಿಎಸ್‌ಐ ಭರ್ತಿ: ತಕರಾರು ವಜಾ

Published:
Updated:

ಬೆಂಗಳೂರು: ಪೊಲೀಸ್‌ ಸಬ್‌ ಇನ್‌­ಸ್ಪೆಕ್ಟರ್‌ಗಳ (ಪಿಎಸ್‌ಐ) 400 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ 2009­ರಲ್ಲಿ ಆರಂಭಿಸಿದ್ದ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.ಸುನೀಲ್‌ ಕುಮಾರ್‌ ಮತ್ತು ಇತ­ರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ­ಯನ್ನು ನ್ಯಾಯಮೂರ್ತಿ ಎನ್‌. ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಹುದ್ದೆಗಳ ಭರ್ತಿಗೆ ಸರ್ಕಾರ ನಡೆಸಿದ್ದ ಲಿಖಿತ ಪರೀಕ್ಷೆ­ಯಲ್ಲಿ ಅಕ್ರಮ ನಡೆದಿದೆ. ಗುಲ್ಬರ್ಗ­ದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂದು ಅರ್ಜಿಯಲ್ಲಿ ದೂರಿದ್ದರು.ಇದನ್ನು ಅಲ್ಲಗಳೆದಿದ್ದ ಸರ್ಕಾರ, ಮಧ್ಯಾಹ್ನ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ತಪ್ಪಾಗಿ ಬೆಳಿಗ್ಗೆ­ಯೇ ವಿತರಿಸಲಾಗಿತ್ತು. ಆದರೆ ತಕ್ಷಣ ಎಚ್ಚೆತ್ತುಕೊಂಡ ಪರೀಕ್ಷಾ ಸಿಬ್ಬಂದಿ, ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳಿಂದ ಹಿಂಪಡೆದರು. ಇಲ್ಲಿ ಅಕ್ರಮ ನಡೆದಿಲ್ಲ ಎಂದು ವಾದಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry