ಮಂಗಳವಾರ, ಅಕ್ಟೋಬರ್ 15, 2019
29 °C

ಪಿಎಸ್‌ಐ ಮೇಲೆ ಎಸ್‌ಪಿ ಹಲ್ಲೆ: ದೂರು

Published:
Updated:

ಚಿಕ್ಕಮಗಳೂರು: `ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್ ತಮ್ಮ ಕಚೇರಿ ಕೊಠಡಿಯಲ್ಲೇ ಸೋಮವಾರ ಹಲ್ಲೆ ಮಾಡಿದ್ದಾರೆ~ ಎಂದು ಸಮೀಪದ ಮಲ್ಲಂದೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಆರೋಪಿಸಿದ್ದಾರೆ.ಅವರ ಬಲಗಣ್ಣಿನ ಹುಬ್ಬಿನ ಮೇಲೆ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್ ಪಂಚಾಕ್ಷರಪ್ಪ, ತಮ್ಮ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಸಂಜೆ ಎಸ್‌ಪಿ ಅವರ ಕೊಠಡಿಗೆ ಹೋಗಿದ್ದಾಗ ಹಲ್ಲೆ ನಡೆಸಿದರು ಎಂದು ಚಂದ್ರಶೇಖರ್ ಅವರು ಆರೋಪಿಸಿದ್ದಾರೆ.`ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದು ಯಾರು? ಚಂದ್ರಶೇಖರ್ 5-6 ದಿನಗಳಿಂದ ಗೈರು ಹಾಜರಾಗಿದ್ದಾರೆ. ಗ್ರಾಮಾಂತರ ಇನ್‌ಸ್ಪೆಕ್ಟರ್ ಈತನ ಅಶಿಸ್ತಿನ ಬಗ್ಗೆ ದೂರು ನೀಡಿದ್ದಾರೆ. ವಿಚಾರಣೆ ಕಾಯ್ದಿರಿಸಿ, ಅಮಾನತು ಮಾಡಿದ್ದೇನೆ. ಅಮಾನತು ಶಿಕ್ಷೆಯಿಂದ ಪಾರಾಗಲು ಹಲ್ಲೆಯ ನಾಟಕ ನಡೆಸುತ್ತಿರಬೇಕು~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ ಪ್ರತಿಕ್ರಿಯಿಸಿದರು.

Post Comments (+)