ಶನಿವಾರ, ಮೇ 15, 2021
25 °C

ಪಿಕ್ಚರ್ ಪ್ಯಾಲೆಸ್

ಚಿತ್ರಗಳು: ಎಸ್.ಕೆ.ದಿನೇಶ್ Updated:

ಅಕ್ಷರ ಗಾತ್ರ : | |

ರಜಾಕಾಲದ ಸುಖ...

 ಇದೇತಾನೆ ಪರೀಕ್ಷೆ ಮುಗಿಸಿದ ಮಕ್ಕಳ ಮನಸ್ಸೀಗ ಬೇಸಿಗೆಯಲ್ಲೂ ತಂಪುತಂಪು. ಉದ್ಯಾನಗಳಲ್ಲಿ ಸಂಜೆ ಮಕ್ಕಳು ಆಟ ಆಡಲು ಅಪ್ಪ-ಅಮ್ಮನ ತಡೆಯಿಲ್ಲ. ಬೆಳಗಿನಿಂದ ಟೀವಿ ಮುಂದೆ ಕೂತ ಮಕ್ಕಳು ಹೊರಗೆ ಹೋಗಿ ಒಂದಿಷ್ಟು ಹೊತ್ತು ಆಟವಾಡಲಿ ಎಂದು ತಾವೇ ಬಲವಂತ ಮಾಡಿ ಕಳುಹಿಸುವವರೂ ಇದ್ದಾರೆ. ಇವುಗಳ ಜೊತೆಗೆ ಬೇಸಿಗೆ ಶಿಬಿರಗಳ ಆಕರ್ಷಣೆ.

 

ಜೋಕಾಲಿ ಮೇಲೆ ಮೊದಲ ಬಾರಿ ಜೀಕುವ ಕಂದಮ್ಮ ಜೋರಾಗಿ ಚೀರುತ್ತದೆ. ಸ್ಕೇಟಿಂಗ್ ಕಟ್ಟಿಕೊಂಡ ಮಕ್ಕಳ ಕಣ್ಣಲ್ಲಿ ಕುತೂಹಲ. ಜಾರೋಬಂಡೆ ಮೇಲೆ ಜಾರಿಬಂದ ಪೋರ ಚೆಡ್ಡಿ ಕೊಳೆಯಾಗಿಲ್ಲವೇ ಎಂದು ಪರೀಕ್ಷಿಸಿಕೊಂಡು ಇನ್ನೊಂದು ಆಟಕ್ಕೆ ಸಜ್ಜಾಗುತ್ತಾನೆ.

 

ಆನೆಗೆ ಜೀವ ಇಲ್ಲದಿರುವುದರಿಂದ ಅದರ ಮೇಲೆ ಹಿಂಡುಹಿಂಡಾಗಿ ಆಡುತ್ತಿರುವವರ ಸಂತೋಷಕ್ಕೆ ಪಾರವೇ ಇಲ್ಲ. ಮಕ್ಕಳ ಕೂಟದಲ್ಲಿ ಈಗ ಇಂಥ ಚಿತ್ರವತ್ತಾದ ಕ್ಷಣಗಳ ನಿತ್ಯ ಮೆರವಣಿಗೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.