ಪಿಕ್ಚರ್ ಪ್ಯಾಲೇಸ್: ಬಾನಿನೆತ್ತರ...

ಗುರುವಾರ , ಜೂಲೈ 18, 2019
24 °C

ಪಿಕ್ಚರ್ ಪ್ಯಾಲೇಸ್: ಬಾನಿನೆತ್ತರ...

Published:
Updated:ಗಗನಚುಂಬಿ ಕಟ್ಟಡಗಳು ನಗರದ ಮುಖಗಳಾಗುತ್ತಿರುವಾಗ, ಈ ಮೊಗವನ್ನು ಸುಂದರಗೊಳಿಸಿದವರು ಯಾರು..? ಬುವಿಯಿಂದ ಬಾನಿನೆತ್ತರಕ್ಕೆ ಏರಿ, ಬಿದ್ದರೆ ನೆತ್ತರದ ಮಡುವಿನಲ್ಲಿ ಎಂಬುದು ಅರಿವಿದ್ದರೂ ಹೊಟ್ಟೆಪಾಡಿಗಾಗಿ ಮೇಲಕ್ಕೇರುವ ಈ ಕಾರ್ಮಿಕರ ಬದುಕು ಮಾತ್ರ ನೆಲದ ಮೇಲೆ ತೆವಳುತ್ತದೆ. ಮೊಬೈಲ್ ಸಂಪರ್ಕ ಸುಗಮವಾಗಲು ಟವರ್ ಹತ್ತುವ ಈ ಹುಡುಗರಿಗೆ ಯಾವ ಸುರಕ್ಷೆಯೂ ಇಲ್ಲ. ಸುರಕ್ಷಾ ಚಕ್ರವೂ ಇಲ್ಲ. ರಸ್ತೆ ಬದಿಯ ಹೋಲ್ಡಿಂಗ್ ಅಂಟಿಸುವಾಗ ಒಂಚೂರು ಎಚ್ಚರ ತಪ್ಪಿದರೂ ಈ ಹುಡುಗರನ್ನೂ ಚಿತ್ರದಲ್ಲೇ ನೋಡಬೇಕು. ಆದರೆ ಬದುಕು ಸಾಗುತ್ತದೆ. ಸಾವಿನಂಜಿಕೆಯಲ್ಲಿ ಅಲ್ಲ, ಜೀವನ ಪ್ರೀತಿಯಿಂದ...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry