`ಪಿಗ್ಗಿ'ಗಾಗಿ ವಿಶೇಷ ಗೀತೆ

7

`ಪಿಗ್ಗಿ'ಗಾಗಿ ವಿಶೇಷ ಗೀತೆ

Published:
Updated:
`ಪಿಗ್ಗಿ'ಗಾಗಿ ವಿಶೇಷ ಗೀತೆ

ನಟಿ ಪ್ರಿಯಾಂಕ ಚೋಪ್ರಾ ಈಗ `ಜಂಜೀರ್' ಚಿತ್ರದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಚಿತ್ರದ ಪ್ರಾರಂಭದಲ್ಲಿ ಬರುವ ಹಾಡಿಗಾಗಿ ಪ್ರಿಯಾಂಕ 100ಜನ ಡ್ಯಾನ್ಸರ್‌ಗಳ ಜತೆಗೆ ಕುಣಿಯಲು ಅಣಿಯಾಗಿದ್ದಾರೆ.`ಜಂಜೀರ್ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಅವರಿಗಾಗಿ ನಾವು ಒಂದು ವಿಶೇಷ ಗೀತೆಯನ್ನು ಚಿತ್ರೀಕರಿಸಲಿದ್ದೇವೆ. ಪ್ರೇಕ್ಷಕರಿಗೆ ಈ ಗೀತೆ ಸಖತ್ ಮೋಡಿ ಮಾಡಲಿದೆ ಎಂಬುದರಲ್ಲಿ ಸಂದೇಹವಿಲ್ಲ.  ಪ್ರಾರಂಭದ ಹಾಡಿನಲ್ಲಿ ಪ್ರಿಯಾಂಕ ಜತೆ ನೂರು ಜನ ಪುರುಷರು ಡ್ಯಾನ್ಸ್‌ರ್‌ಗಳ ಜತೆ ಕುಣಿಯಲಿದ್ದಾರೆ. ಇದೇ 27, 28 ಮತ್ತು 29ರಂದು ಈ ವಿಶೇಷ ಗೀತೆಯನ್ನು  ಚಿತ್ರೀಕರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿರುವುದಾಗಿ' ಚಿತ್ರತಂಡ ತಿಳಿಸಿದೆ.`ಸಿನಿಮಾಕ್ಕೆ ಮುನ್ನುಡಿಯಂತಿರುವ ಈ ಪ್ರಾರಂಭಿಕ ಗೀತೆ ಅದ್ದೂರಿಯಾಗಿ ಮೂಡಿಬರಬೇಕು ಎಂಬುದು ಎಲ್ಲರ ಆಶಯ. ಈ ಗೀತೆಗೆ ಗಣೇಶ್ ಆಚಾರ್ಯ ಕೋರಿಯೋಗ್ರಫಿ ಮಾಡಲಿದ್ದಾರಂತೆ. ಈ ಗೀತೆಯಂತೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ' ಎಂಬುದು ಚಿತ್ರತಂಡದ ನಂಬಿಕೆ.ಟಾಲಿವುಡ್‌ನಿಂದ ಬಾಲಿವುಡ್‌ಗೆ ಎಂಟ್ರಿ ನೀಡಿರುವ ರಾಮ್‌ಚರಣ್ ತೇಜ ಅವರಿಗೂ ಕೂಡ ಈ ಚಿತ್ರದಲ್ಲಿ ಒಂದು ವಿಶೇಷ ಗೀತೆಯನ್ನು ಸಂಯೋಜಿಸಲಾಗಿದೆಯಂತೆ. ಅಂದಹಾಗೆ ಈ ಹಿಂದೆ ಅಮಿತಾಬ್ ಮತ್ತು ಜಯಾ ಬಚ್ಚನ್ ನಟಿಸಿದ್ದ `ಜಂಜೀರ್' ಚಿತ್ರ ರಿಮೇಡ್‌ನಲ್ಲಿ ರಾಮ್‌ಚರಣ್ ತೇಜಾ ಅಮಿತಾಬ್ ಅವರ ಪಾತ್ರವನ್ನು, ಪ್ರಿಯಾಂಕ ಚೋಪ್ರಾ ಜಯಾ ಬಚ್ಚನ್ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ.ಈ ನಡುವೆ `ಜಂಜೀರ್' ಚಿತ್ರದ ಸೆಟ್‌ಗಳಿಂದ ಬಾಜಿ ಕಟ್ಟುತ್ತಿರುವ ಸುದ್ದಿಯೊಂದು ಬಂದಿದೆ.  ರಾಮ್‌ಚರಣ್ ತೇಜ ಹಿಂದಿ ಕಲಿಯಲು, ಪ್ರಿಯಾಂಕಾ ದಕ್ಷಿಣ ಭಾರತದ ಶೈಲಿಯಲ್ಲಿ ಮಾತನಾಡಲು ದಿನಕ್ಕೆ ಏನಿಲ್ಲವೆಂದರೂ ಮೂರು ತಾಸು ಹೆಣಗಾಡುತ್ತಿದ್ದಾರಂತೆ. ಇಬ್ಬರಲ್ಲಿ ಯಾರು ಮೊದಲು ತಪ್ಪು ಮಾಡುತ್ತಾರೆ ಎಂದು ಚಿತ್ರೀಕರಣದಲ್ಲಿ ನಿರತರಾದವರು 500 ರೂಪಾಯಿ ಬಾಜಿ ಕಟ್ಟುತ್ತಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry