ಮಂಗಳವಾರ, ಮಾರ್ಚ್ 9, 2021
23 °C

ಪಿಚ್ಚರ್ ನೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಚ್ಚರ್ ನೋಡಿ

ಪಿ. ಶ್ರೀನಿವಾಸ್‌ ನಿರ್ದೇಶನದ ‘ಮಹಾತ್ಮ ಕಬೀರ್‌’ (1962) ರಾಜಕುಮಾರ್‌ ನಟನೆಯ ಒಂದು ವಿಶಿಷ್ಟ ಸಿನಿಮಾ. ‘ಹಿಂದೂ ಮುಸಲ್ಮಾನ್‌ ಏಕತೆಗಾಗಿ ತನ್ನ ಪ್ರಾಣವನ್ನೇ ಒಪ್ಪಿಸಿದ ರಾಷ್ಟ್ರಪಿತನ ನೆನಪಿಗೆ ನಮ್ರ ಕಾಣಿಕೆ’ ಎನ್ನುವ ಅರ್ಪಣೆಯೇ ಸಿನಿಮಾದ ಉದ್ದೇಶವನ್ನು ಹೇಳುವಂತಿದೆ.ಭಕ್ತಿಯನ್ನು ಬಂಡಾಯದ ರೂಪದಲ್ಲಿ ಬಳಸಿಕೊಂಡ ಹದಿನೈದನೇ ಶತಮಾನದ ಸಂತಕವಿ ಕಬೀರ. ಭಾರತದ ಚಾರಿತ್ರಿಕ ಕ್ಷೇತ್ರಗಳಲ್ಲಿ ಒಂದಾದ ಕಾಶಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಹಿಂದೂ ಮುಸಲ್ಮಾನ್‌ ಗಲಭೆ–ಗೊಂದಲಗಳು ಹಾಗೂ ಎರಡೂ ಧರ್ಮಗಳಲ್ಲಿನ ಅತಿರೇಕಗಳನ್ನು ಮಾನವೀಯತೆಯ ನೆಲೆಯಲ್ಲಿ ಕಬೀರ ವಿಮರ್ಶೆಗೆ ಒಡ್ಡುತ್ತಾನೆ.ಮನುಷ್ಯನ ಅಂತರಂಗದಲ್ಲಿ ದೇವರನ್ನು ಕಾಣುವ ಕಬೀರ, ‘ಮನುಷ್ಯಧರ್ಮ ಎಲ್ಲಕ್ಕೂ ಮಿಗಿಲು’ ಎನ್ನುವ ಸಂದೇಶ ಸಾರುತ್ತಾನೆ. ಈ ಚಾರಿತ್ರಿಕ ಕಥನವನ್ನು ಕೊಂಚ ಭಾವುಕ ನೆಲೆಯಲ್ಲಿ ‘ಮಹಾತ್ಮ ಕಬೀರ್‌’ ಚಿತ್ರಿಸಿದೆ. ಭಕ್ತಿಪ್ರಧಾನ ಪಾತ್ರಗಳಲ್ಲಿ ನುರಿತ ರಾಜಕುಮಾರ್‌ ಅಭಿನಯ ಚಿತ್ರಕ್ಕೊಂದು ವಿಶೇಷ ಕಳೆ ತಂದುಕೊಟ್ಟಿದೆ. ಕೃಷ್ಣಕುಮಾರಿ, ಬಾಲಕೃಷ್ಣ, ಉದಯಕುಮಾರ್‌, ಎಂ.ಎನ್. ಲಕ್ಷ್ಮೀದೇವಿ ತಾರಾಗಣದಲ್ಲಿರುವ ಪ್ರಮುಖರು. ಈಗ ರಾಜಕುಮಾರ್ ಅವರ ಪುತ್ರ ಶಿವರಾಜ್‌ಕುಮಾರ್‌ ಕಬೀರನಾಗಿ ನಟಿಸಿರುವ ‘ಸಂತೆಯಲ್ಲಿ ನಿಂತ ಕಬೀರ’ ತೆರೆಕಂಡು ಸಹೃದಯರ ಗಮನಸೆಳೆದಿರುವ ಸಂದರ್ಭದಲ್ಲಿ, ಹಳೆಯ ನೆನಪುಗಳ ನೇವರಿಕೆಯ ರೂಪದಲ್ಲಿ ‘ಮಹಾತ್ಮ ಕಬೀರ್‌’ ಚಿತ್ರವನ್ನು goo.gl/0AADWQ ಕೊಂಡಿ ಬಳಸಿ ನೋಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.