ಗುರುವಾರ , ಫೆಬ್ರವರಿ 25, 2021
18 °C
ಪಿಚ್ಚರ್ ನೋಡಿ

ಒಲುಮೆಯ ರೇಷ್ಮೆ ನೇಯುವವನ ಕಥಾ ಚಿತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲುಮೆಯ ರೇಷ್ಮೆ ನೇಯುವವನ ಕಥಾ ಚಿತ್ರಣ

ಪ್ರಿಯದರ್ಶನ್‌ ನಿರ್ದೇಶನದ ‘ಕಾಂಚೀವರಂ’ 2008ರಲ್ಲಿ ಅತ್ಯುತ್ತಮ ಚಿತ್ರ ‘ಸ್ವರ್ಣಕಮಲ’ ಪುರಸ್ಕಾರ ಪಡೆದ ತಮಿಳು ಸಿನಿಮಾ. ಬಡತನವನ್ನು ಅದೆಷ್ಟು ಸೌಂದರ್ಯಾತ್ಮಕವಾಗಿ ಕಟ್ಟಿಕೊಡಬಹುದು.ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಈ ಸಿನಿಮಾ. ಪ್ರಕಾಶ್‌ ರೈ ನಿರ್ಮಾಣ–ನಟನೆಯ ಈ ಸಿನಿಮಾ ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿನ ನಟನೆಗಾಗಿ ಪ್ರಕಾಶ್‌ ರೈ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯೂ ದೊರೆತಿದೆ.

ಕಾಂಚೀಪುರಂ ಎನ್ನುವ ಊರಿನಲ್ಲಿನ ನೇಕಾರರ ಬದುಕಿನ ದಾರುಣ ಕಥೆ ಚಿತ್ರದಲ್ಲಿದೆ. ಒಡೆಯರ ಕಣ್ಗಾವಲಿನಲ್ಲಿ ರೇಷ್ಮೆಸೀರೆಗಳನ್ನು ನೇಯುವ ನೇಕಾರರ ವೈಯಕ್ತಿಕ ಬದುಕು ಛಿದ್ರವಾಗಿರುವ ಸಂದರ್ಭ ಇಲ್ಲಿಯದು.

ಇಲ್ಲೊಬ್ಬ ನೇಕಾರನಿಗೆ ತನ್ನ ಮಗಳಿಗೆ ಮದುವೆಯಲ್ಲಿ ರೇಷ್ಮೆಸೀರೆ ಉಡಿಸುವ ಕನಸು. ಆದರೆ, ಅದೇನು ಸುಲಭದ ಬಾಬತ್ತೇ? ಪ್ರತಿದಿನ ಸಂಜೆ ನೇಯ್ಗೆ ಕೆಲಸದಿಂದ ಮನೆಗೆ ಮರಳುವಾಗ ಆತ ಕದ್ದ ರೇಷ್ಮೆನೂಲುಗಳನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ಮನೆಗೆ ಸಾಗಿಸುತ್ತಾನೆ.ರೇಷ್ಮೆಸೀರೆ ನೂಲುವ ಆತನ ಮಹತ್ವಾಕಾಂಕ್ಷೆ ಹಾಗೂ ತಂದೆ–ಮಗಳ ಸಂಬಂಧದ ಕಥೆ ಚಿತ್ರದುದ್ದಕ್ಕೂ ಹರಡಿಕೊಂಡಿದೆ. ಮಾನವೀಯ ಸಂಬಂಧಗಳ ಜೊತೆಗೆ ಅದರ ಭಾಗವಾಗಿಯೇ ಇರುವ ಮನುಷ್ಯನ ಕ್ರೌರ್ಯವನ್ನು ಸಿನಿಮಾ ಭಾವುಕ ನೆಲೆಗಟ್ಟಿನಲ್ಲಿ ಚಿತ್ರಿಸುತ್ತದೆ.

ಪ್ರಕಾಶ್‌ ರೈ ಅಭಿನಯ ಚಿತ್ರದ ಅತ್ಯುತ್ತಮ ಅಂಶಗಳಲ್ಲೊಂದು. ಕಾಂಚೀಪುರಂ ಪಟ್ಟಣವನ್ನು ಮರುನಿರ್ಮಿಸುವಲ್ಲಿ ಸಾಬು ಸಿರಿಲ್‌ ಕಲಾನಿರ್ದೇಶನ, ತಿರು ಅವರ ಛಾಯಾಗ್ರಹಣ ಸಿನಿಮಾದ ಸೌಂದರ್ಯಪ್ರಜ್ಞೆಗೆ ಪೂರಕವಾಗಿವೆ.

ಭಾಷೆಯನ್ನು ಮೀರಿ ಮನಸ್ಸಿಗೆ ಆಪ್ತ ಎನ್ನಿಸುವ ಈ ಚಿತ್ರವನ್ನು goo.gl/To6vzd ಕೊಂಡಿ ಬಳಸಿ ನೋಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.