ಬುಧವಾರ, ಜೂನ್ 16, 2021
21 °C

ಪಿಜಿಇಟಿ: ರ‌್ಯಾಂಕ್ ಪಟ್ಟಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಜನವರಿ 29ರಂದು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ವೈದ್ಯಕೀಯ ವಿಭಾಗದಲ್ಲಿ ಡಾ.ಕೆ.ಎಂ.ಆದರ್ಶ್, ಡಾ.ಬರ್ಟನ್ ಕ್ರೆಗ್ ಮೊಂತೆರೊ ಮತ್ತು ಡಾ. ಪ್ರದ್ಯೋತ್ ತಿವಾರಿ ಕ್ರಮವಾಗಿ ಮೊದಲ ಮೂರು ರ‌್ಯಾಂಕ್ ಪಡೆದಿದ್ದಾರೆ.ಡಾ. ಅಮನ್ ಸಚ್‌ದೇವ್, ಡಾ. ಸ್ವಗತಾ ದಾಸ್ ಮತ್ತು ಡಾ. ವಿಭೋರ್ ಮದನ್ ಅವರು ದಂತವೈದ್ಯಕೀಯ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ರ‌್ಯಾಂಕ್‌ಗಳನ್ನು ಪಡೆದಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು (ಡಿಡಿಡಿ.್ಟಜ್ಠಜಛಿಠಿ2012.್ಚಟಞ) ಪ್ರಕಟಿಸಲಾಗಿದೆ.ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದ 9,127 ವಿದ್ಯಾರ್ಥಿಗಳ ಪೈಕಿ 6,344 ವಿದ್ಯಾರ್ಥಿಗಳು ಸಾಮಾನ್ಯ ಕೋಟಾದಲ್ಲಿ ಮತ್ತು 484 ವಿದ್ಯಾರ್ಥಿಗಳು ಸೇವಾನಿರತರ ಕೋಟಾದಡಿ ಅರ್ಹತೆ ಪಡೆದಿದ್ದಾರೆ. ದಂತವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ 1,386 ಅಭ್ಯರ್ಥಿಗಳು ಸಾಮಾನ್ಯ ಕೋಟಾ ಮತ್ತು 11 ಅಭ್ಯರ್ಥಿಗಳು ಸೇವಾನಿರತರ ಕೋಟಾದಲ್ಲಿ ಪ್ರವೇಶಕ್ಕೆ ಅರ್ಹರಾಗಿದ್ದಾರೆ ಎಂದು ವಿ.ವಿ. ಪ್ರಕಟಣೆ ತಿಳಿಸಿದೆ.ವೈದ್ಯಕೀಯ ವಿಭಾಗದಲ್ಲಿ ಮೊದಲ ಹತ್ತು ರ‌್ಯಾಂಕ್‌ಗಳ ಪೈಕಿ ಏಳು ರ‌್ಯಾಂಕ್‌ಗಳು ಪುರುಷರ ಪಾಲಾಗಿವೆ. ದಂತ ವೈದ್ಯಕೀಯ ವಿಭಾಗದ ಮೊದಲ ಹತ್ತು ರ‌್ಯಾಂಕ್‌ಗಳ ಪೈಕಿ ಆರು ರ‌್ಯಾಂಕ್‌ಗಳು ಪುರುಷರಿಗೆ ಸಂದಿವೆ. ಕೋರ್ಸ್‌ಗಳ ಪ್ರವೇಶಕ್ಕೆ ಏಪ್ರಿಲ್‌ನಲ್ಲಿ ಕೌನ್ಸೆಲಿಂಗ್ ನಡೆಯಲಿದೆ, ಸರ್ಕಾರದಿಂದ ಸೀಟು ಹಂಚಿಕೆ ಪಟ್ಟಿ ಪ್ರಕಟವಾದ ನಂತರ ಕೌನ್ಸೆಲಿಂಗ್ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ರ‌್ಯಾಂಕ್ ವಿಜೇತರ ಹೆಸರು: ವೈದ್ಯಕೀಯ ವಿಭಾಗ- ಡಾ. ವಿಶ್ವನಾಥ ವಿಜಯ್ ಜೋಷಿ (ನಾಲ್ಕನೇ ರ‌್ಯಾಂಕ್), ಡಾ.ಎನ್. ಶಿವರಾಜ್ (5), ಡಾ. ಶ್ವೇತಾರಾಣಿ (6), ಡಾ. ವಿಭೂತಿ ಪಿ. ಕಶ್ಯಪ್ (7), ಡಾ. ಏಂಜೆಲ್ ಮೇರಿ ಜೋಸೆಫ್ (8), ಡಾ.ಬಿ.ಎ. ಮೀನಾಕ್ಷಿ (9), ಡಾ. ಪ್ರತೀಕ್ ಪಾಟೀಲ್ (10).

ದಂತ ವೈದ್ಯಕೀಯ ವಿಭಾಗ- ಡಾ. ಸನ್ನಿ ಗುಪ್ತ (ನಾಲ್ಕನೇ ರ‌್ಯಾಂಕ್), ಡಾ. ದಾಮನ್ ನಾಗಪಾಲ್ (5), ಡಾ. ಜಿತೇಶ್ ಕುಮಾರ್ ಹರ‌್ಯಾಣಿ (6), ಡಾ.ಆರ್. ಅರುಣ್ (7), ಡಾ. ಶ್ರೇಯ ಧವನ್ (8), ಡಾ. ನೂರ್ ಸಾಯಿರಾ ವಾಜಿದ್ ನಜ್ಮಾ ಹಾಜಿರಾ (9), ಡಾ. ದಿವಿ ಮಿತ್ತಲ್ (10)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.