ಗುರುವಾರ , ಫೆಬ್ರವರಿ 25, 2021
17 °C
ಟೈರ್‌ಗೆ ಬೆಂಕಿ ಹಚ್ಚಿ ಅಸಮಾಧಾನ ವ್ಯಕ್ತ: ಡಿವೈಎಸ್ಪಿ ಅನುಪಮಾ ಶೆಣೈ ಮರು ನೇಮಕಕ್ಕೆ ಒತ್ತಾಯ

ಕೂಡ್ಲಿಗಿ ಬಂದ್ ಕರೆ; ಪಿಟಿಪಿ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ ಬಂದ್ ಕರೆ; ಪಿಟಿಪಿ ರಾಜೀನಾಮೆಗೆ ಆಗ್ರಹ

ಕೂಡ್ಲಿಗಿ: ದೂರವಾಣಿ ಕರೆ ಸ್ವೀಕರಿಸದಿರುವ ಕಾರಣಕ್ಕಾಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿಸಿದ ವಿವಾದಕ್ಕೆ ಗುರಿಯಾಗಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ವರ್ತನೆ ಖಂಡಿಸಿ ಶನಿವಾರ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣ ಬಂದ್ ಕರೆ ನೀಡಲಾಗಿದೆ. ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ, ಅಂಗಡಿ ಮುಂಗಟ್ಟೆಗಳನ್ನು ಮುಚ್ಚಿಸುತ್ತಿದ್ದಾರೆ. ಅನುಪಮಾ ಅವರ ಮರು ನೇಮಕಕ್ಕೆ ಆಗ್ರಹಿಸಿ, ಪಿಟಿಪಿ ಅವರ ರಾಜೀನಾಮೆಗೆ ಒತ್ತಾಯಿಸಿದರು.

ಎಐಎಸ್‌ಎಫ್‌, ಎಐವೈಎಫ್‌, ತಾಲ್ಲೂಕು ವಾಲಿಬಾಲ್‌ ಫೆಡರೇಷನ್, ಆಟೊ ಚಾಲಕರ ಸಂಘ ಮತ್ತು ಕರ್ನಾಟಕ ಯುವ ಸೇನೆ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಬೆಳಿಗ್ಗೆ ಇಲ್ಲಿನ ಮದಕರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ಗಾಂಧಿ ಚಿತಾಭಸ್ಮ ಸ್ಮಾರಕದಿಂದ ಪ್ರತಿಭಟನೆ ಆರಂಭವಾಗಿದೆ.ಬಂದ್ ಕರೆಯಿಂದಾಗಿ ದೊಡ್ಡ ಅಂಗಡಿಗಳು, ಹೊಟೇಲ್‌ಗಳು ಮುಚ್ಚಿದ್ದವು. ಅಲ್ಲಲ್ಲಿ ತೆರೆದಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಪ್ರತಿಭಟನಾಕಾರರು ಮುಚ್ಚಿಸುತ್ತಿರುವ ದೃಶ್ಯ ಕಂಡುಬಂತು.ವರ್ಗಾವಣೆ ಮಾಡಿರುವ ಡಿವೈಎಸ್ಪಿ ಅನುಪಮಾ ಶೆಣೈ ಅವರನ್ನು ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.