ಗುರುವಾರ , ನವೆಂಬರ್ 21, 2019
23 °C

ಪಿಟ್‌ಗೆ ಜೂಲಿಯಿಂದ ಕುರ್ಮಾ, ಟಿಕ್ಕಾ

Published:
Updated:

ಲಂಡನ್‌ನಲ್ಲಿರುವ ನಟಿ ಏಂಜಲಿನಾ ಜೂಲಿ ತಮ್ಮ ಗೆಳೆಯ ಬ್ರಾಡ್ ಪಿಟ್‌ಗಾಗಿ ಪ್ರೀತಿಯಿಂದ ಭಾರತೀಯ ಖಾದ್ಯಗಳನ್ನು ಆಯ್ದು ಕಳುಹಿಸಿದ್ದಾರಂತೆ. ಆಡಿನ ಭೂನಾ, ಚಿಕನ್ ಕೂರ್ಮಾ, ಚಿಕ್ಕನ್ ಟಿಕ್ಕಾ ಆ ದೊಡ್ಡ ಮೆನುವಿನ ಪ್ರಮುಖ ಖಾದ್ಯಗಳು.

ಕಾಂಗೊ ಹಾಗೂ ರ‌ವಾಂಡಾದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಭಾಷಣ ಮಾಡಲು ಜಿ8 ಶೃಂಗ ಸಭೆಗಾಗಿ ಇಲ್ಲಿಗೆ ಆಗಮಿಸಿದ ಜೂಲಿಗೆ ತಮ್ಮ ಗೆಳೆಯನಿಗೆ ಇಷ್ಟವೆನಿಸುವ ಮೂರು ಖಾದ್ಯಗಳನ್ನು ಆಯ್ಕೆ ಮಾಡಲು ಕೇಳಿಕೊಳ್ಳಲಾಯಿತು. ಬ್ರಾಡ್ ಬಹುವಾಗಿ ಮೆಚ್ಚುವ ಈ ಮೂರು ಭಾರತೀಯ ಖಾದ್ಯಗಳನ್ನು ಜೂಲಿ ಆಯ್ಕೆ ಮಾಡಿಕೊಂಡರು. ತಕ್ಷಣವೇ ಆಕೆ ತನ್ನ ಅಂಗರಕ್ಷಕ ರೇ ಹಾಗೂ ಹಿರಿಯ ಮಗ ಮ್ಯಾಡೊಕ್ಸ್‌ನನ್ನು ಕಳುಹಿಸಿ ಆ ಮೂರು ಖಾದ್ಯಗಳೊಂದಿಗೆ ಕೇಸುಗಟ್ಟಲೆ ಕಿಂಗ್‌ಫಿಷರ್ ಹಾಗೂ ಕೋಬ್ರಾ ಬಿಯರ್‌ಗಳನ್ನು ಬ್ರಾಡ್‌ಗಾಗಿ ಕಾಯ್ದಿರಿಸಿದ್ದಾರಂತೆ.

ಅಮೆರಿಕದಲ್ಲಿರುವ ಬ್ರಾಡ್‌ಗೆ ಇಷ್ಟವೆನಿಸುವ ಈ ಖಾದ್ಯಗಳನ್ನು ಅತ್ಯಂತ ಪ್ರೀತಿಯಿಂದ ಆಯ್ದು ಅವುಗಳನ್ನು ಅಚ್ಚುಕಟ್ಟಾಗಿ ಪೊಟ್ಟಣ ಕಟ್ಟಿಸಿ ಬ್ರಾಡ್‌ಗೆ ತಲುಪುವಂತೆ ಮಾಡುವ ವ್ಯವಸ್ಥೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)