ಬುಧವಾರ, ಮೇ 18, 2022
23 °C

ಪಿಡಿಓ ಅಸಮರ್ಪಕ ಕಾರ್ಯನಿರ್ವಹಣೆ ಆರೋಪ.ಗ್ರಾ.ಪಂ. ಸದಸ್ಯರಿಂದ ತಾ.ಪಂ.ಗೆ ಮುತ್ತಿಗೆ.

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಾಥ್‌ಗೌಡರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅವರ ಬದಲಿಗೆ ಬೇರೊಬ್ಬರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ನಗರದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿಗೆ ಸೋಮವಾರ ಬೀಗ ಹಾಕಿ ಧರಣಿ ನಡೆಸಿದರು.ಬೆಳಿಗ್ಗೆ 11ರ ಹೊತ್ತಿಗೆ ತಾಪಂ ಕಚೇರಿಗೆ ಬಂದು ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಭಟ್ ಅವರೊಡನೆ ಗ್ರಾಮಸ್ಥರು ಸಮಸ್ಯೆಯ ಬಗ್ಗೆ ಚರ್ಚಿಸಿದರು. ಶ್ರೀನಾಥ್‌ಗೌಡರು ತಮಗೆ ಹಲವು ಪಂಚಾಯಿತಿಯ ಜವಾಬ್ದಾರಿ ವಹಿಸಿರುವುದರಿಂದ ನಿರಂತರವಾಗಿ ಪಂಚಾಯಿತಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅದರಿಂದ ಪಂಚಾಯಿತಿಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಳ್ಳುತ್ತಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಮುಂಚೆ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ನಾರಾಯಣಸ್ವಾಮಿ ಅವರನ್ನೆ ನಿಯೋಜಿಸಬೇಕು ಎಂದೂ ಪಟ್ಟು ಹಿಡಿದರು ಎನ್ನಲಾಗಿದೆ.ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರೇ ಕೆಲವು ದಿನ ಮಾರ್ಜೇನಹಳ್ಳಿ ಪಂಚಾಯಿತಿ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಭಟ್ ತಿಳಿಸಿದರು. ನಂತರ ತಮ್ಮನ್ನು ಸಂಪರ್ಕಿಸಿದ ಗ್ರಾಮಸ್ಥರಿಗೆ ವ್ಯವಸ್ಥಾಪಕರು ಮಧ್ಯಾಹ್ನದ ಬಳಿಕ ಕಚೇರಿಗೆ ಬರುವುದಾಗಿ ತಿಳಿಸಿದರು. ಆದರೆ, ಅದಕ್ಕೆ ಒಪ್ಪದ ಗ್ರಾಮಸ್ಥರು ಕೂಡಲೇ ಬರಬೇಕು ಎಂದು ಆಗ್ರಹಿಸಿ ದಿಢೀರನೆ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಧರಣಿ ನಡೆಸಿದರು. ಎಂ.ಶಂಕರ್, ರಾಜೇಶ್, ರಾಜೇಶ್ವರಿ, ಸೊಣ್ಣೇಗೌಡ, ನಾಗರಾಜ್, ರಂಗೇಶ್, ರಾಮಚಂದ್ರಗೌಡ, ವಾಜಿದ್‌ಪಾಷಾ, ಚಿಕ್ಕಮುನಿವೆಂಕಟಪ್ಪ, ಮುನಿಶಾಮಪ್ಪ, ಜ್ಯೋತಿ ಚಂದ್ರ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.