ಪಿಡಿಜೆ ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

7

ಪಿಡಿಜೆ ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

Published:
Updated:

ವಿಜಾಪುರ: ನಗರದಲ್ಲಿ ಜರುಗಿದ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಇಲ್ಲಿಯ ಪಿಡಿಜೆ `ಅ~ ವಿಭಾಗದ ಬಾಲಕಿಯರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.ಶಾಲೆಯ ಪವಿತ್ರಾ ಹಳಕವಟಗಿ, ಸ್ನೇಹಾ ಹುನ್ನೂರ, ಸಹನಾ ಜೈನಾಪುರ, ಅಪೂರ್ವ ಜೈನಾಪುರ, ಶ್ರೇಯಾ ಕುಲ ಕರ್ಣಿ, ದಾನಮ್ಮ ಬಡಚಿ, ಲಕ್ಷ್ಮಿ ಮೇಲಿ ನಮನಿ ಅವರು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ ಎಂದು ಉಪಪ್ರಾಚಾರ್ಯ ಎಸ್.ಎ. ಸಿದ್ದಾಂತಿ ತಿಳಿಸಿದ್ದಾರೆ.ರಾಜ್ಯ ಮಟ್ಟಕ್ಕೆ ಆಯ್ಕೆ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರೌಢ ಶಾಲೆಗಳ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜಾಪುರದ ಸಿಕ್ಯಾಬ್ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು  ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಎನ್.ಎಸ್. ಭೂಸನೂರ ತಿಳಿಸಿದ್ದಾರೆ.ರಾಜ್ಯ ಮಟ್ಟಕ್ಕೆ ಆಯ್ಕೆ: ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಮೇಲಾಟಗಳ ಸ್ಪರ್ಧೆಯಲ್ಲಿ ಇಲ್ಲಿಯ ಇಕ್ರಾ ಉರ್ದು ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಅಮ್ರೀನ್ ಎಸ್. ಮುದ್ದೇಬಿಹಾಳ (ಎತ್ತರ ಜಿಗಿತ), ಸಮ್ರೀನ್ ಎಸ್. ನಗದೇಕರ (ತ್ರಿವಿಧ ಜಿಗಿತ), ಆಯಿಷಾ ಎಸ್. ಗೋಗಿ (ಗುಂಡು ಎಸೆತ) ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಾಧ್ಯಾಪಕಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry