ಪಿಡುಗನ್ನು ನಿವಾರಿಸಿ

7

ಪಿಡುಗನ್ನು ನಿವಾರಿಸಿ

Published:
Updated:

ಬೆಂಗಳೂರು – ಮೈಸೂರು ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ಕೆಂಗೇರಿ – ಮೆಜೆಸ್ಟಿಕ್‌ ನಡುವೆ ಬೋಗಿಗಳ ಕಿಟಕಿಗಳನ್ನು ಮುಚ್ಚಿಯೇ ಪ್ರಯಾಣಿ­ಸುವ ಅನಿವಾರ್ಯ ಪರಿಸ್ಥಿತಿ ಇಂದಿನ ದಿನಗಳಲ್ಲಿದೆ.ಈ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು, ಚಲಿಸುವ ರೈಲಿಗೆ ಕಲ್ಲು­ಗಳ­ನ್ನೆಸೆದು ಆತಂಕ ಸೃಷ್ಟಿಸುತ್ತಿದ್ದಾರೆ. ಈ ತಿಂಗಳ 12 ರಂದು ಯಶವಂತಪುರ – ಕಾರವಾರ ರೈಲಿಗೆ ಕಲ್ಲುಗಳನ್ನೆಸೆದು ಭಯದ ವಾತಾವರಣವನ್ನು ಸೃಷ್ಟಿಸ­ಲಾಗಿತ್ತು.ಪರಿಣಾಮವಾಗಿ ಆ ದಿನ ರೈಲು ಕೆಲ ಕಾಲ ವಿಳಂಬವಾಗಿ ಚಲಿಸು­ವಂತೆ ಆಯಿತು. ಈ ದುಷ್ಟಪ್ರವೃತ್ತಿ ಕೆಲವು ವರ್ಷಗಳಿಂದಲೇ ನಡೆದು ಬರುತ್ತಿದೆ. ಇದನ್ನು ಮಟ್ಟಹಾಕು­ವವರು ಯಾರೂ ಇಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry