ಪಿತೃತ್ವ ಖಟ್ಲೆ: ತಿವಾರಿ ರಕ್ತ ಮಾದರಿ ಪಡೆಯಲು ಪೊಲೀಸ್ ಬಳಕೆಗೆ ಕೋರ್ಟ್ ಅಸ್ತು

7

ಪಿತೃತ್ವ ಖಟ್ಲೆ: ತಿವಾರಿ ರಕ್ತ ಮಾದರಿ ಪಡೆಯಲು ಪೊಲೀಸ್ ಬಳಕೆಗೆ ಕೋರ್ಟ್ ಅಸ್ತು

Published:
Updated:

ನವದೆಹಲಿ (ಐಎಎನ್ಎಸ್): ಪಿತೃತ್ವ ಖಟ್ಲೆಗೆ ಸಂಬಂಧಿಸಿದಂತೆ ಡಿಎನ್ ಎ ಪರೀಕ್ಷೆಗಾಗಿ ರಕ್ತದ ಮಾದರಿ ಪಡೆಯುವ ಸಲುವಾಗಿ ಹಿರಿಯ ಕಾಂಗ್ರೆಸ್ ನಾಯಕ ಎನ್.ಡಿ. ತಿವಾರಿ ಅವರನ್ನು ನ್ಯಾಯಾಲಯ ಆವರಣಕ್ಕೆ ಕರೆತರಲು ಅಗತ್ಯ ಬಿದ್ದಲ್ಲಿ ಪೊಲೀಸ್ ನೆರವು ಪಡೆಯುವಂತೆ ದೆಹಲಿ ಹೈಕೋರ್ಟ್ ಬುಧವಾರ ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿತು.ತಾನು 86ರ ಹರೆಯದ ತಿವಾರಿ ಅವರ ಪುತ್ರ ಎಂಬುದಾಗಿ ಹೇಳಿ 32ರ ಹರೆಯದ ರೋಹಿತ್ ಶೇಖರ್ ಈ ಪಿತೃತ್ವ ಖಟ್ಲೆಯನ್ಹು ದಾಖಲಿಸಿದ್ದಾರೆ. ತಿವಾರಿ ಅವರು ಡಿಎನ್ಎ ಪರೀಕ್ಷೆಗಾಗಿ ತಮ್ಮ ರಕ್ತದ ಮಾದರಿಯನ್ನು ನೀಡಬೇಕು ಎಂಬುದಾಗಿ ಈ ಹಿಂದೆ ನ್ಯಾಯಾಲಯ ಹೇಳಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry