ಪಿಪಿಬಿಎ ಮೇಲುಗೈ

7
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಪಿಪಿಬಿಎ ಮೇಲುಗೈ

Published:
Updated:

ಶಿವಮೊಗ್ಗ : ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಸಂಸ್ಥೆಯ (ಪಿಪಿಬಿಎ) ಅರ್ಚನಾ ಪೈ, ಅಶ್ವಿನಿ ಭಟ್‌, ಮಹಿಮಾ ಅಗರವಾಲ್‌, ಅಪೇಕ್ಷಾ ನಾಯಕ್‌, ಶಿಖಾ ಗೌತಮ್‌ ಇಲ್ಲಿ ಶಿವಮೊಗ್ಗ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ, ರಾಜ್ಯ ಬ್ಯಾಡ್ಮಿಂ­ಟನ್‌ ಸಂಸ್ಥೆ ವತಿಯಿಂದ ನಡೆಯುತ್ತಿ­ರುವ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯ­ನ್‌­ಷಿಪ್‌ನ  ಹದಿನೇಳು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದರು.ಅರ್ಚನಾ ಪೈ 21–09, 21–10ರಿಂದ  ಎಚ್‌ಎಚ್‌ಬಿಎ ತಂಡದ ರಂಜಿತಾ ಶೋಕಂಡ್‌ ವಿರುದ್ಧ ಗೆದ್ದರೆ, ಅಶ್ವಿನಿ ಭಟ್‌ 21–12, 21–10ರಿಂದ ಮೆಟ್‌ಕಟ್‌ನ ನವ್ಯಾ ಕಡೇಕರ್‌ ವಿರುದ್ಧ ಗೆಲುವು ಗಳಿಸಿದರು. ಮಹಿಮಾ ಅಗರವಾಲ್‌ 21–8, 21–7ರಿಂದ ಡಬ್ಲುಪಿಬಿಎ ತಂಡದ ಚೈತ್ರಾ ಅಲಂಕಾರ್‌ ಎದುರು ಗೆದ್ದರೆ, ಅಪೇಕ್ಷಾ ನಾಯಕ್‌ 21–10, 21–15ರಿಂದ ಶೀತಲ್‌ ಸುದರ್ಶನ್‌ ವಿರುದ್ಧ ಜಯ ಗಳಿಸಿದರು.ಇತರ ಪಂದ್ಯಗಳಲ್ಲಿ ಬೆಳಗಾವಿಯ ಮೆರ್ನಾಜ್‌ ಇರಾನಿ 21–19, 21–17ರಿಂದ ಶಿವಮೊಗ್ಗದ ಬಿ.ಎಸ್‌.­ಅಮೃತಾ ಅವರನ್ನು ಮಣಿಸಿದರು. ಮೆಟ್‌ಕಟ್‌ನ ಹರ್ಶಲಾ ದಿನಕರ್‌ 21–10, 21–15ರಿಂದ ಮಂಗಳೂರಿನ ಪ್ರತೀಕ್ಷಾ ಅವರನ್ನು ಸೋಲಿಸಿದರು. ಹದಿಮೂರು ವರ್ಷದೊಳಗಿನ ಬಾಲ­ಕಿ­ಯರ ವಿಭಾಗದ ಎರಡನೇ ಸುತ್ತಿನಲ್ಲಿ ಕೆ.ಬಿ.ಎ.ಯ ಶ್ರೀಭಾಗರ್ವಿ ಭಾಸ್ಕರ್‌ 21–13, 21–2ರಿಂದ ಪಿಡಬ್ಲುಪಿಯ ರಿಯಾ ರಾಯ್‌ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry