ಗುರುವಾರ , ಮೇ 28, 2020
27 °C

ಪಿಯಾಜಿಯೊ: ಅಪೆ ಮಿನಿ ಪೇಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಯಾಜಿಯೊ ವೆಹಿಕಲ್ ಪ್ರೈವೇಟ್ ಲಿಮಿಟೆಡ್, ‘ಅಪೆ ಮಿನಿ’ ಹೆಸರಿನ ಸರಕು ಸಾಗಣೆಯ ವಾಹನವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

ಅರ್ಧ ಟನ್ ಸಾಮರ್ಥ್ಯದ ಈ ಸರಕು ಸಾಗಣೆ ವಾಹನವು ಈ ವಲಯದಲ್ಲಿ ಸಂಸ್ಥೆಯ ಮಾರಾಟ ಪಾಲು ಹೆಚ್ಚಿಸಲು ನೆರವಾಗಲಿದೆ. ಗ್ರಾಹಕರ ಅಭಿಪ್ರಾಯ ಆಧರಿಸಿ ಈ ವಾಹನದ ವಿನ್ಯಾಸ ರೂಪಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿ ಛೋಪ್ರಾ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಈ ಹೊಸ ವಾಹನದ ಬೆಲೆಯನ್ನು ದೇಶದಾದ್ಯಂತ ಏಕರೂಪವಾಗಿ (ರೂ. 1,73,600) ನಿಗದಿಪಡಿಸಲಾಗಿದೆ . ಪ್ರತಿ ಲೀಟರ್‌ಗೆ 29 ಕಿ. ಮೀ ದೂರ ಕ್ರಮಿಸುವ ಇಂಧನ ಕ್ಷಮತೆ, ಗರಿಷ್ಠ ಪ್ರಮಾಣದ ಸರಕು ಸಾಗಿಸುವ ಸಾಮರ್ಥ್ಯ, ಸುರಕ್ಷಿತ ಪ್ರಯಾಣ ಮತ್ತು ಕಾರಿನಲ್ಲಿ ಇರುವಂತಹ ಕ್ಯಾಬಿನ್ ಸೌಲಭ್ಯ ಇದರ ಇತರ ವಿಶೇಷತೆಗಳಾಗಿವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.